ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಠಾಣೆಯಲ್ಲಿ ಹಾಜರು

ಮಂಜೇಶ್ವರ: ಪೊಲೀಸರನ್ನು ಕಂಡು ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ದ್ದಾನೆ.  ಈ ವೇಳೆ ಆತನನ್ನು ಪೊಲೀಸ ರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

ಕಣ್ವತೀರ್ಥ ನಿವಾಸಿ ಭವಿಷ್ (೩೯) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈ ತಿಂಗಳ ೧೫ರಂದು ಸಂಜೆ ೬ ಗಂಟೆಗೆ ಭವಿಷ್ ಸ್ಕೂಟರ್ ನಲ್ಲಿ ಕಣ್ವತೀರ್ಥ ಗೇಟ್ ಬಳಿಯಿಂದ ಬೀಚ್ ಭಾಗಕ್ಕೆ ತೆರಳುತ್ತಿದ್ದನು. ಈ ವೇಳೆ ಎದುರಿನಿಂದ ಪೊಲೀಸ್ ವಾಹನ ಬರುತ್ತಿರುವುದನ್ನು ಕಂಡ ಈತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾ ಗಿದ್ದನು. ಪೊಲೀಸರು ಸ್ಕೂಟರ್ ತಪಾಸಣೆ ನಡೆಸಿದಾಗ  ಅದರಲ್ಲಿ ೯೦ ಮಿಲ್ಲಿಯ ೩೨೦ ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಯಾಗಿತ್ತು. 

RELATED NEWS

You cannot copy contents of this page