ಮಧೂರಿನಲ್ಲಿ ಜಿಲ್ಲಾ ಮಟ್ಟದ ವಿಶ್ವ ಮಣ್ಣು ದಿನಾಚರಣೆ

ಮಧೂರು: ವಿಶ್ವ ಮಣ್ಣು ದಿನಾಚರಣೆ ನಿಮಿತ್ತ ಜಿಲ್ಲಾ ಮಣ್ಣು ಸಮೀಕ್ಷೆ ಮಣ್ಣು ಸಂರಕ್ಷಣಾ ಇಲಾಖೆ ಹಾಗೂ ಮಧೂರು ಪಂಚಾಯತ್ ಜಂಟಿಯಾಗಿ ಜಿಲ್ಲಾ ಮಟ್ಟದ ವಿಶ್ವ ಮಣ್ಣು ದಿನಾಚರಣೆ ಶಾಸಕ ಎನ್.ಎ.ನೆಲ್ಲಿಕುನ್ನ್ ಉದ್ಘಾಟಿ ಸಿದರು. ನಮ್ಮ ಮಣ್ಣನ್ನು ಸಂರಕ್ಷಿ ಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಅಕ್ರಮವಾಗಿ ಮಣ್ಣು ದುರ್ಬಳಕೆ ಮಾಡಿಕೊಂಡರೆ ಅದರ ಪರಿಣಾಮ ಎದುರಿಸಬೇಕಾಗುವುದು ನಾವೇ ಎಂದು ಎನ್.ಎ.ನೆಲ್ಲಿಕುನ್ನ್ ಹೇಳಿದರು. ವಿಶ್ವ ಮಣ್ಣು ದಿನಾಚರಣೆ ನಿಮಿತ್ತ ಜಿಲ್ಲಾ ಮಣ್ಣು ಸಮೀಕ್ಷೆ ಮಣ್ಣು ಸಂರಕ್ಷಣಾ ಇಲಾಖೆ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿ ಸಿದ್ದ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕರು ಬಹುಮಾನ ವಿತರಿಸಿದರು. ರೈತರ ತರಬೇತಿ ತರಗತಿಗಳಿಗೆ ಎಡಕ್ಕಾಡ್ ಕೃಷಿ ಭವನದ ಹಿರಿಯ ಕೃಷಿ ಸಹಾಯಕ ಪಿ.ಡಿ.ದಾಸ್, ಜಿಲ್ಲಾ ಸಾಯಿಲ್ ಸರ್ವೇ ಅಧಿಕಾರಿಗಳಾದ ಎಸ್.ನಿರಂಜ್ ಬಾಬು ಮತ್ತು ಜೆಮಿ ಸ್ಟೀಫನ್ ಎಂಬಿವರು ನೇತೃತ್ವ ನೀಡಿದರು. ಮಧೂರು ಪಂ. ಅಟಲ್ಜಿ ಆಡಿಟೋರಿ ಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಸಸಿ ವಿತರಿಸಿದರು. ಉಪಾಧ್ಯಕ್ಷೆ ಎಂ.ಸ್ಮಿಜಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ ಎಸ್.ನಾಯಕ್, ಬ್ಲಾಕ್ ಪಂಚಾಯತ್ ಸದಸ್ಯ ಸುಕುಮಾರನ್ ಕುದುರೆಪ್ಪಾಡಿ, ಮಧೂರು ಪಂಚಾಯತ್ ಸದಸ್ಯರಾದ ಜಿ.ಶ್ರೀಮತಿ, ನಸೀರಾ, ಎಂ.ಅಬ್ದುಲ್ ಜಲೀಲ್, ಎಸ್.ಮುಹಮ್ಮದ್ ಹಬೀಬ್, ಉಷಾ ಸುರೇಶ್, ಸೌಮ್ಯಾ ದಿನೇಶ್, ರಾಧಾ ಕೆ. ಪಚ್ಚಕ್ಕಾಡ್ ಮತ್ತು ಸಿ.ಎಚ್. ಉದಯಕುಮಾರ್ ಮಾತನಾ ಡಿದರು. ಜಿಲ್ಲಾ ಮಣ್ಣು ಸಮೀಕ್ಷೆ ಅಸಿಸ್ಟೆಂಟ್ ಡೈರೆಕ್ಟರ್ ವೈನಿ ರಾಜನ್ ಸ್ವಾಗತಿಸಿ, ಮಧೂರು ಕೃಷಿ ಭವನದ ಕೃಷಿ ಅಧಿಕಾರಿ ಬಿ.ಎಚ್.ನಫೀಸತ್ ಹಶೀನಾ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page