ಮಧೂರು ಕ್ಷೇತ್ರ ನೌಕರ ಎಂ.ಪಿ.ಚಂದ್ರನ್ ನಾಳೆ ಸೇವೆಯಿಂದ ನಿವೃತ್ತಿ
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರದಲ್ಲಿ ೩೦ ವರ್ಷಗಳಿಂದ ಎಲ್‌ಡಿ ಕ್ಲಾರ್ಕ್ ಆಗಿ ಸೇವೆ ಸಲ್ಲಿಸುತ್ತಿರುವ ಎಂ.ಪಿ. ಚಂದ್ರನ್ ನಾಳೆ ಉದ್ಯೋಗದಿಂದ ನಿವೃತ್ತರಾಗಲಿದ್ದಾರೆ.
ಕಣ್ಣೂರು ಜಿಲ್ಲೆಯ ಪಳಯಂಗಾಡಿ ವೆಂಗರ ನಿವಾಸಿಯಾದ ಇವರು ಪಯ್ಯನ್ನೂರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೌಕರನಾಗಿ ಸೇವೆ ಆರಂಭಿಸಿದ್ದರು. ಬಳಿಕ ಮಧೂರು ಕ್ಷೇತ್ರಕ್ಕೆ ವರ್ಗಾವಣೆಗೊಂಡಿದ್ದರು. ನಿವೃತ್ತರಾಗುವ ಇವರಿಗೆ ಮಧೂರು ಕ್ಷೇತ್ರ ನೌಕರರ ವತಿಯಿಂದ ನಾಳೆ ಕ್ಷೇತ್ರದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿರುವುದು. ಸಂಗೀತ, ಭಜನೆ, ಗಾನಮೇಳ, ಭರತನಾಟ್ಯ ಸಾಧನೆಗೈದಿರುವ ಇವರು ಮಧೂರಿನ ನಾಟ್ಯ ಮಂಟಪದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಿನ್ನೆಲೆಗಾಯಕನಾಗಿ ಭಾಗವಹಿಸಿದ್ದಾರೆ. ಶೃಂಗೇರಿ, ಕೊಲ್ಲೂರು, ಪೆರ್ಲಶ್ಶೇರಿ, ಎಡನೀರು ಮಠ, ಮಲ್ಲ ಮೊದಲಾದ ಕಾರ್ಯಕ್ರಮಗಳಲ್ಲಿ ನೃತ್ಯ, ಸಂಗೀತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವಿದ್ಯಾನಗರ ವಾಟರ್ ಅಥೋರಿಟಿಯಲ್ಲಿ ಉದ್ಯೋಗಿಯಾಗಿರುವ ಶ್ರೀಲೇಖ ಇವರ ಪತ್ನಿಯಾಗಿದ್ದಾರೆ. ಮಕ್ಕಳು ಸಂಕೀರ್ತ್(ಭೂಗರ್ಭಶಾಸ್ತ್ರಜ್ಞ), ನಂದನ ಎಸ್. ಚಂದ್ರನ್ (ಎಲ್‌ಬಿಎಸ್ ಕಾಲೇಜು ಅಂತಿಮ ವರ್ಷ ವಿದ್ಯಾರ್ಥಿನಿ).