ಮಧೂರು ಪಂ.ನಲ್ಲಿ ನೌಕರರ ಅಭಾವ: ಜನಪ್ರತಿನಿಧಿಗಳಿಂದ ಪಂ. ಜೋಯಿಂಟ್ ಡೈರೆಕ್ಟರ್ ಕಚೇರಿ ಮುಂದೆ ಧರಣಿ

ಕಾಸರಗೋಡು: ಮಧೂರು ಗ್ರಾಮ ಪಂಚಾಯತ್‌ನಲ್ಲಿ ನೌಕರರ ಅಭಾವ ದಿಂದ ತೀವ್ರ ಸಮಸ್ಯೆ ಎದುರಾಗಿದ್ದು, ಇದರಿಂದ ಪಂಚಾಯತ್‌ನ ಅಧ್ಯಕ್ಷ ಸಹಿತ  ಎಲ್ಲಾ ಜನಪ್ರತಿನಿಧಿಗಳು ಇಂದು ಬೆಳಿಗ್ಗೆ ಪಂಚಾಯತ್‌ನ ಜೋಯಿಂಟ್ ಡೈರೆಕ್ಟರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು. ಬಳಿಕ ಜೋಯಿಂಟ್ ಡೈರೆಕ್ಟರ್ ಜಿ. ಸುಧಾಕರನ್ ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ  ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವುದಾಗಿ ಭರವಸೆ ನೀಡಿದರು.

ಪಂಚಾಯತ್‌ನಲ್ಲಿ ನಾಲ್ಕು ಮಂದಿ ಕ್ಲರ್ಕ್‌ಗಳ ಹುದ್ದೆ ಹಲವು ಕಾಲದಿಂದ ತೆರವುಬಿದ್ದಿದೆಯಾದರೂ  ನೇಮಕಾತಿಗೆ ಕ್ರಮ ಕೈಗೊಂಡಿಲ್ಲ. ನಾಲ್ಕು ತಿಂಗಳ ಹಿಂದೆಯಷ್ಟೇ ನೇಮಕಗೊಂಡ ಕಾರ್ಯದರ್ಶಿ ಇದೀಗ ವರ್ಗಾವಣೆ ಪಡೆದಿದ್ದು, ಶೀಘ್ರ ತೆರಳಲಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪಂಚಾಯತ್ ನಲ್ಲಿ ವಿವಿಧ ಯೋಜನೆಗಳ ನಿರ್ವ ಹಣೆಗೆ ಅಡಚಣೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೌಕರರನ್ನು ಶೀಘ್ರ ನೇಮಿಸಬೇಕೆಂದು ಒತ್ತಾಯಿಸಿ ಜನಪ್ರತಿನಿಧಿಗಳು ಧರಣಿ ನಡೆಸಿದರು. ಪಂಚಾಯತ್ ಕಾರ್ಯದರ್ಶಿ  ಈ ಮಾರ್ಚ್‌ವರೆಗೆ ಇಲ್ಲಿಯೇ ಕರ್ತವ್ಯದಲ್ಲಿರುವಂತೆ ತಿಳಿಸಲಾಗುವುದು. ಖಾಲಿ ಬಿದ್ದಿರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಸುವುದಾಗಿ ಜೋಯಿಂಟ್ ಡೈರೆಕ್ಟರ್ ಭರವಸೆ ನೀಡಿದ್ದಾರೆ. ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಯಶೋಧ ನಾಯ್ಕ್, ಉಮೇಶ್ ಗಟ್ಟಿ, ಬ್ಲೋಕ್ ಪಂಚಾ ಯತ್ ಸದಸ್ಯರಾದ ಸುಕುಮಾರ ಕುದ್ರೆಪ್ಪಾಡಿ, ಜಮೀಲ ಅಹಮ್ಮದ್ ಹಾಗೂ ಪಂಚಾಯತ್‌ನ ಎಲ್ಲಾ ಜನಪ್ರತಿನಿಧಿಗಳು ಧರಣಿಯಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

You cannot copy content of this page