ಮಧ್ಯಾಹ್ನದೂಟಕ್ಕೆ ಕೆಸುವಿನ ಗಡ್ಡೆ ಪದಾರ್ಥ ಮಕ್ಕಳಿಗೆ ತುರಿಕೆಯೆಂದು ದೂರು

ಬದಿಯಡ್ಕ: ಮಧ್ಯಾಹ್ನದೂಟಕ್ಕೆ ಕೆಸುವಿನ ಗಡ್ಡೆ (ಮುಂಡಿ)ಯಿಂದ ತಯಾರಿಸಿದ ಪದಾರ್ಥ ತಿಂದು ನೀರ್ಚಾಲ್‌ನ ಒಂದು ಶಾಲೆಯ ಮಕ್ಕಳಿಗೆ ತುರಿಕೆ ಉಂಟಾಗಿದೆ ಎಂದು ದೂರಲಾಗಿದೆ. ತರಗತಿಯಲ್ಲಿ ಮಕ್ಕಳು ತುರಿಸುತ್ತಿದ್ದರೂ ಅಧ್ಯಾಪಕರು ಮಕ್ಕಳನ್ನು ಆಸ್ಪತ್ರೆಗೆ ಕೊಂಡು ಹೋಗಲಿಲ್ಲ ಎಂದು ದೂರಲಾಗಿದೆ. ಬಳಿಕ ಹೆತ್ತವರು ತಲುಪಿ ೫ ಮಕ್ಕಳನ್ನು ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದಾರೆ. ಬದಿಯಡ್ಕ ಆರೋಗ್ಯ  ಕೇಂದ್ರದ ನೌಕರರು ತಲುಪಿ ಪ್ರಾಥಮಿಕ ಹೇಳಿಕೆ ದಾಖಲಿಸಿದ್ದಾರೆ. ಮಧ್ಯಾಹ್ನದೂಟಕ್ಕೆ ತರಕಾರಿಗಳನ್ನು ಮನೆಯಿಂದ ತರಬೇಕೆಂದು ಅಧಿಕಾರಿಗಳು ಮಕ್ಕಳಿಗೆ ಸೂಚಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಕ್ಕಳು ಕೆಸುವಿನ ಗಡ್ಡೆಯನ್ನು ತಂದಿರುವುದಾಗಿಯೂ, ಅದನ್ನು ಪದಾರ್ಥ ಮಾಡಿ ಮಕ್ಕಳಿಗೆ ಬಡಿಸಿರುವುದಾಗಿಯೂ ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page