ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ: ತಿರುವನಂತಪುರ ನಿವಾಸಿಗಾಗಿ ಶೋಧ
ಕುಂಬಳೆ: ಮನೆಗೆ ಅತಿಕ್ರಮಿಸಿ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಪೆರುವಾಡ್ ಮುಳಿಯಂಗಾನ ನಿವಾಸಿ ಆಮಿನ (೬೩) ಎಂಬಿವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಸಂಜೆ ವೇಳೆ ವ್ಯಕ್ತಿಯೋರ್ವ ಮನೆಗೆ ಅತಿಕ್ರಮಿಸಿ ನುಗ್ಗಿ ಆಮಿನರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಹಲ್ಲೆಗೈದ ವ್ಯಕ್ತಿ ತಿರುವನಂತಪುರ ನಿವಾಸಿಯೆಂದು ಹೇಳಲಾಗುತ್ತಿದೆ. ಈ ಬಗ್ಗೆ ಆಮಿನ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತಿರುವನಂತಪುರ ನಿವಾಸಿಗಾಗಿ ಶೋಧ ನಡೆಸುತ್ತಿದ್ದಾರೆ.