ಮನೆಯಲ್ಲಿ ಕುಸಿದು ಬಿದ್ದು ಬಾಲಕಿ ಮೃತ್ಯು

ಮಂಜೇಶ್ವರ: ಮನೆಯಲ್ಲಿ ಆಟ ವಾಡುತ್ತಿದ್ದ ಬಾಲಕಿ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಮಜಿಬೈಲ್ ಸಮೀಪದ ಕರಿಬೈಲ್ ಹೊಸಗದ್ದೆ ನಿವಾಸಿ ದಿ| ಡಾನಿಲ್ ಡಿಸೋಜರ ಪುತ್ರಿ ಪ್ರಿನ್ಸಿಲ್ಲ (8) ಮೃತಪಟ್ಟ ಬಾಲಕಿ. ಈಕೆ ಮಜಿಬೈಲ್ ಸರಕಾರಿ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದಾಳೆ. ಶನಿವಾರ ಬೆಳಿಗ್ಗೆ ಸುಮಾರು 9.30ರ ವೇಳೆ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ನೀರು ಕೇಳಿ ಕುಡಿದಿದ್ದಾಳೆ. ಅಲ್ಪ ಹೊತ್ತಿನಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟಿ ್ಟರುವುದಾಗಿ ಸಂಬAಧಿಕರು ತಿಳಿಸಿ ದ್ದಾರೆ. ಹೃದಯಘಾತ ಸಾವಿಗೆ ಕಾರಣ ವೆನ್ನಲಾಗಿದೆ. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿ ದ್ದಾರೆ. ಮಂಗಳೂರು ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಭಾನುವಾರ ಸಂಜೆ ಮಂಜೇಶ್ವರ ಚರ್ಚ್ ನಲ್ಲಿ ಅಂತ್ಯಸAಸ್ಕಾರ ನಡೆಸಲಾಯಿತು. ಮೃತರು ತಾಯಿ ಪ್ರಮೀಳ, ಸಹೋದರ ಸಹೋದರಿಯರಾದ ಪ್ರಿನ್ಸಿಯ, ಪ್ರಿನ್ಸೋನ್, ಪ್ರಿನ್ಸಿತ, ಪ್ರಿನ್ಸಿಕ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page