ಪರೀಕ್ಷಾ ಹಾಲ್‌ನಲ್ಲಿ ಮೊಬೈಲ್ ಫೋನ್ ಉಪಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಬಂಧನ : ಉತ್ತರ ಕಳುಹಿಸಿ ಕೊಟ್ಟಾತನಿಗಾಗಿ ಶೋಧ

ಪೈವಳಿಕೆ:  ಪರೀಕ್ಷಾ ಹಾಲ್ ನಲ್ಲಿ ಮೊಬೈಲ್ ಫೋನ್ ಉಪ ಯೋಗಿಸಿ ಉತ್ತರ ಬರೆದ ಪೈವಳಿಕೆ ನಿವಾಸಿ ಸೆರೆಗೀಡಾಗಿದ್ದಾನೆ. ಪೈವಳಿಕೆ  ಕುರುಡಪದವು ಬಳಿಯ ಸಾದಂU ಯ ನಿವಾಸಿ ಎಸ್. ಜನಾರ್ದನ (36) ಎಂಬಾತನನ್ನು ಕೂತುಪರಂಬ ಎಸಿಪಿ ಸಿಬಿ ಟೋಂ ನೇತೃತ್ವದಲ್ಲಿ ಬಂಧಿಸಲಾಗಿದೆ. ಎಸ್. ಜನಾರ್ದನ ಕೆಎಸ್‌ಇಬಿ ವರ್ಕಾಡಿ ಸೆಕ್ಷನ್‌ನಲ್ಲಿ ತಾತ್ಕಾಲಿಕ ನೌಕರನಾಗಿದ್ದಾನೆ. ಜುಲೈ ೧ರಂದು ಮಟ್ಟನ್ನೂರು ಪಾಲಿಟೆಕ್ನಿಕ್‌ನಲ್ಲಿ ನಡೆದ ಕೇರಳ ಗವ. ಸರ್ಟಿಫಿಕೇಟ್ ಎಕ್ಸಾಮಿನೇಶನ್ (ಕೆಜಿಸಿಇ)ಗೆ ಮೊಬೈಲ್ ಫೋನ್ ಉಪಯೋಗಿಸಿ ಈತ ಪರೀಕ್ಷೆ ಬರೆದಿದ್ದಾನೆ. ತಾತ್ಕಾ ಲಿಕ ನೌಕರನಾದ ಜನಾರ್ದನನಿಗೆ  ಖಾಯಂ ನೇಮಕಾತಿ ಲಭಿಸಬೇಕಾದರೆ ಈ ಪರೀಕ್ಷೆ ಉತ್ತೀರ್ಣನಾಗಬೇಕು. ಆದ್ದರಿಂದ ಪರೀಕ್ಷಾ ಹಾಲ್‌ನಲ್ಲಿ ಈತ  ನಕಲು ಹೊಡೆದಿದ್ದಾನೆನ್ನಲಾಗಿದೆ.  ಪರೀಕ್ಷೆಯ ಪೂರ್ವಭಾವಿಯಾಗಿ ಕಣ್ಣೂರು ಮೋಡರ್ನ್ ಐಟಿಐಯಲ್ಲಿ   ನಡೆದ ತರಗತಿಯಲ್ಲಿ ಜನಾರ್ದನ ಪಾಲ್ಗೊಂಡಿದ್ದನು. ಈ ಸಂಸ್ಥೆಯ ಅಧ್ಯಾಪಕನಾದ ವಡಗರ ನಿವಾಸಿ ಸುರೇಶ್‌ಬಾಬು ಮೊಬೈಲ್ ಫೋನ್ ಮೂಲಕ ಉತ್ತರಗಳನ್ನು ಕಳುಹಿಸಿಕೊಟ್ಟಿ ರುವುದಾಗಿ ತಿಳಿದುಬಂದಿದೆ. ಜನಾರ್ದನ ಸೆರೆಗೀಡಾದ ವಿಷಯ ತಿಳಿದು ಸುರೇಶ್‌ಬಾಬು ತಲೆಮರೆಸಿಕೊಂ ಡಿದ್ದಾನೆ. ಈತ ಎಡ್ಮಿನ್ ಆಗಿರುವ ವಾಟ್ಸಾಪ್ ಮೂಲಕ ಉತ್ತರಗಳನ್ನು ಪರೀಕ್ಷಾರ್ಥಿಗಳಿಗೆ ಕಳುಹಿಸಿಕೊ ಟ್ಟಿದ್ದನು. ಜನಾರ್ದನನ ಹೊರತು ಇತರ 21 ಮಂದಿ ಪರೀಕ್ಷೆ ಬರೆದಿದ್ದಾರೆ. ಇವರಿಗೂ ಉತ್ತರಗ ಳನ್ನು ಇದೇ ರೀತಿ ನೀಡಿರಬಹು ದೆಂದು ಸಂಶಯಿಸಲಾಗುತ್ತಿದೆ. ಈ ಕುರಿತು ತನಿಖೆ ಆರಂಭಿಸಲಾಗಿದೆ.   ಪೊಲೀಸ್ ತಂಡದಲ್ಲಿ ಎಸಿಪಿ ಆಫೀಸ್‌ನ ಕೆ. ಸುನಿಲ್ ಕುಮಾರ್, ವಿ. ವಿನೀಶ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಪಿ. ಜೋಷಿತ್, ಸ್ಕ್ವಾಡ್ ಸದಸ್ಯರಾದ ಸುಧೀಶ್, ದೀಪೇಶ್, ಬಿಜೇಶ್, ಪ್ರಜೀಶ್, ಶಮೀರ್ ಎಂಬಿ ವರಿದ್ದರು. ಪರೀಕ್ಷಾ ಸೆಂಟರ್‌ನ ಸೂಪರ್‌ವೈಸರ್ ನೀಡಿದ ದೂರಿನಂತೆ ಕೇಸು ದಾಖಲಿಸಿ ತನಿಖೆ ನಡೆಸಲಾಗಿದೆ.

You cannot copy contents of this page