ಕಾಸರಗೋಡು: ನಿಲ್ಲಿಸಿದ್ದ ಆಟೋ ರಿಕ್ಷಾಗಳಿಂದ ಕಳವು ನಡೆಸುತ್ತಿದ್ದಾತನನ್ನು ಪೊಲೀಸರು ಕೈಯಾರೆ ಸೆರೆಹಿಡಿದಿದ್ದಾರೆ. ಚಿಟ್ಟಾರಿಕ್ಕಲ್ ನಿವಾಸಿಯಾದ ಶೈಜು ಜೋಸೆಫ್ (34) ಎಂಬಾತನನ್ನು ತಲಶ್ಶೇರಿ ಪೊಲೀಸರು ಬಂಧಿಸಿದ್ದಾರೆ. ಆಟೋ ರಿಕ್ಷಾಗಳನ್ನು ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿ ಚಾಲಕರು ಚಹಾ ಕುಡಿಯಲೋ ಅಥವಾ ಇತರ ಅಗತ್ಯಗಳಿಗೆ ತೆರಳಿದ ಸಂದರ್ಭದಲ್ಲಿ ವಾಹನಗಳಿಂದ ಹಣ ಮೊದಲಾದವು ಗಳನ್ನು ಶೈಜು ಜೋಸೆಫ್ ಕಳವು ನಡೆಸುತ್ತಿದ್ದನೆನ್ನಲಾಗಿದೆ. ಕಳವು ಬಗ್ಗೆ ಹಲವರಿಂದ ದೂರು ಲಭಿಸಿದ ಹಿನ್ನೆಲೆ ಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಜುಲೈ ೮ರಂದು ತಲಶ್ಶೇರಿ ಹಳೆ ಬಸ್ ನಿಲ್ದಾಣ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾದಿಂದ ೮ ಸಾವಿರ ರೂಪಾಯಿ ಕಳವು ನಡೆದಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಸಮೀಪದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಕಳ್ಳನ ದೃಶ್ಯ ಪತ್ತೆಯಾಗಿತ್ತು. ಇದರಂತೆ ತಲಶ್ಶೇರಿ ಪೊಲೀಸ್ ಠಾಣೆಯ ಸಿಪಿಒ ಶಿಜಿನ್ ಕಾರಾಯಿ ತನಿಖೆ ನಡೆಸುತ್ತಿದ್ದ ವೇಳೆ ಮತ್ತೆ ಕಳವಿಗಾಗಿ ತಲುಪಿದ ಶೈಜು ಜೋಸೆಫ್‌ನನ್ನು ಕೈಯ್ಯಾರೆ ಸೆರೆಹಿಡಿಯಲಾಗಿದೆ. ಆಟೋ ಚಾಲಕರ ಸಮವಸ್ತ್ರ ಧರಿಸಿ ಶೈಜು ಜೋಸೆಫ್ ಆಟೋ ಸ್ಟ್ಯಾಂಡ್‌ಗಳಿಗೆ ತಲುಪಿ ಕಳವುನಡೆಸುತ್ತಿದ್ದನೆನ ಲಾಗಿದೆ. ಈತನ ವಿರುದ್ಧ ಕಾಸರ ಗೋಡು, ಕಣ್ಣೂರು ಜಿಲ್ಲೆಗಳಲ್ಲಾಗಿ ೧೭ರಷ್ಟು ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಕಳವು ನಡೆಸುವ ಹಣವನ್ನು ಬಳಸಿ ಪ್ರಿಯ ತಮೆಯೊಂ ದಿಗೆ ಸುತ್ತಾಡುವುದು ಈತನ ಹವ್ಯಾಸವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






