ಮನೆಯಲ್ಲಿ ಪತ್ರ ಬರೆದಿಟ್ಟು ಯುವಕ ನಾಪತ್ತೆ
ಕುಂಬಳೆ: ಯುವಕನೋರ್ವ ಮನೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾದ ಘಟನೆ ನಡೆದಿದೆ.
ಕುಬಣೂರು ನಿವಾಸಿ ಮಮ್ಮುಂಞಿ ಗುರ್ಮಾ ಖಾದರ್ ಎಂಬವರ ಪುತ್ರ ರಾಸಿಕ್ (23) ನಾಪತ್ತೆಯಾದ ಯುವಕ. ಇಂದು ಮುಂಜಾನೆ 4.30ರ ವೇಳೆ ಮನೆಯವರು ಎದ್ದು ನೋಡಿದಾಗ ರಾಸಿಕ್ ನಾಪತ್ತೆಯಾಗಿದ್ದನು. ಈ ಬಗ್ಗೆ ಕೂಡಲೇ ಕುಂಬಳೆ ಪೊಲೀಸರಿಗೆ ಮನೆಯವರು ದೂರು ನೀಡಿದ್ದಾರೆ. ಇದೇ ವೇಳೆ ಮನೆಯೊಳಗೆ ರಾಸಿಕ್ ಬರೆದಿಟ್ಟ ಪತ್ರವೊಂದು ಲಭಿಸಿದೆ. ಅದರಲ್ಲಿ ‘ನನ್ನನ್ನು ಹುಡುಕಬೇಡಿ. ನಾನು ಸ್ಕೂಟರ್ನಲ್ಲಿ ಹೋಗುತ್ತಿದ್ದೇನೆ. ಸ್ಕೂಟರ್ ಕಾಸರಗೋಡು ಅಥವಾ ಮಂಗಳೂರಿನಲ್ಲಿರಬಹುದು’ ಎಂದು ತಿಳಿಸಲಾಗಿತ್ತು.
ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು ಇದರಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ಸ್ಕೂಟರ್ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ. ಸ್ಕೂಟರ್ ಅಲ್ಲಿ ನಿಲ್ಲಿಸಿ ರಾಸಿಕ್ ಬೇರೆಲ್ಲಿಗೋ ತೆರಳಿರಬಹುದೆಂದು ಶಂಸಯಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.