ಮನೆಯೊಳಗಿನ ನಿಧಿ ತೆಗೆದು ನೀಡುವ ಭರವಸೆಯಿಂದ ಚಿನ್ನಾಭರಣ ನೀಡಿದ ಮಹಿಳೆಗೆ ವಂಚನೆ: ಮಂತ್ರವಾದಿ ಸೆರೆ
ಪಾಲಕ್ಕಾಡ್: ಮನೆ ಯೊಳಗಿರುವ ನಿಧಿಯನ್ನು ತೆಗೆದು ನೀಡುವುದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ಸ್ಥಳಾಂ ತರಿಸಬೇಕೆಂದು ನಿರ್ದೇಶಿಸಿ ಚಿನ್ನಾಭರಣಗಳನ್ನು ಅಪಹರಿಸಿ ಪರಾರಿಯಾದ ಮಂತ್ರವಾದಿಯನ್ನು ಪೊಲೀಸರು ಸೆರೆ ಹಿಡಿದರು. ಪಾಲಕ್ಕಾಡ್ ತೆಕ್ಕುಂಕರದ ರಫೀಕ್ ಮೌಲವಿಯನ್ನು ಸೆರೆ ಹಿಡಿಯಲಾಗಿದೆ. ನೆಲ್ಲಾಯ ನಿವಾಸಿಯಾದ ಮನೆಯೊಡತಿ ವಂಚನೆಗೆ ಗುರಿಯಾಗಿದ್ದಾರೆ. ಫೇಸ್ಬುಕ್ ಮೂಲಕ ಈಕೆ ಮಂತ್ರವಾದಿಯ ಪರಿಚಯ ಗೊಂಡಿದ್ದರು. ಮಂತ್ರವಾದಿಯ ಸಾಹಸ ಕಾರ್ಯಗಳನ್ನು ಫೇಸ್ಬುಕ್ ಮೂಲಕ ತಿಳಿದುಕೊಂಡ ಗೃಹಿಣಿ ಮಂತ್ರವಾದಿಯಲ್ಲಿ ವಿಶ್ವಾಸ ವಿರಿಸಿ ದರು. ಮನೆಯಲ್ಲಿ ಚಿನ್ನಾಭರಣದ ದೊಡ್ಡ ನಿಧಿ ಸಂಗ್ರಹವಿರುವುದಾಗಿ ದಿವ್ಯದೃಷ್ಟಿಯಿಂದ ಕಂಡು ಬರುತ್ತಿರು ವುದಾಗಿ ಮಂತ್ರವಾದಿ ತಿಳಿಸಿದ್ದು, ಅದನ್ನು ವಿಶ್ವಾಸಕ್ಕೆ ತೆಗೆದ ಗೃಹಿಣಿ ನಿಧಿಯನ್ನು ತೆಗೆಯಲು ಮಂತ್ರ ವಾದಿಯ ಸಹಾಯ ಯಾಚಿಸಿದ್ದಳು. ಇದರ ಮುಂಚಿತವಾಗಿ ಮನೆಯಲ್ಲಿ ರುವ ಎಲ್ಲಾ ಚಿನ್ನಾಭರಣಗಳನ್ನು ಅಲ್ಲಿಂದ ಬದಲಿಸಬೇಕೆಂದು ಮಂತ್ರವಾದಿ ಹೇಳಿದ್ದು, ಗೃಹಿಣಿ ಸಂಪೂರ್ಣ ವಿಶ್ವಾಸದಲ್ಲಿ ಅದಕ್ಕೆ ಒಪ್ಪಿದ್ದಾರೆ. ಮಂತ್ರವಾದಿ ಕಳುಹಿ ಸಿದ ಓರ್ವನ ಕೈಯಲ್ಲಿ ಚಿನ್ನಾ ಭರಣಗಳನ್ನು ನೀಡಿದ್ದು, ಅದನ್ನು ತೆಗೆದುಕೊಂಡು ಹೋದ ಬಳಿಕ ಮಂತ್ರವಾದಿಯ ಸುಳಿವು ಇಲ್ಲದ ಕಾರಣ ವಂಚನೆಗೊಳಗಾದ ಬಗ್ಗೆ ಗೃಹಿಣಿಯ ಅರಿವಿಗೆ ಬಂದಿದೆ.
ಆ ಬಳಿಕ ಈಕೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನಡೆ ಸಿದ ತನಿಖೆಯಲ್ಲಿ ಮಂತ್ರವಾದಿ ಯನ್ನು ಸೆರೆ ಹಿಡಿದಿದ್ದಾರೆ. ಇದೇ ರೀತಿಯಲ್ಲಿ ಈತ ವರ್ಷಗಳ ಹಿಂದೆ ಬೇರೆ ಕಡೆಗಳಲ್ಲಿಯೂ ವಂಚಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.