ಮನೆ ಮೇಲೆ ಮಗುಚಿದ ಕಾರು: ಅಧ್ಯಾಪಕ, ಪತ್ನಿ ಅಪಾಯದಿಂದ ಪಾರು

ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಮನೆ ಮೇಲೆ ಮಗುಚಿ ಬಿದ್ದಿದೆ. ಮನೆಯ ಸನ್‌ಶೀಟ್‌ನಲ್ಲಿ ಸಿಲುಕಿ ನೇತಾಡುತ್ತಿದ್ದ ಕಾರಿನಿಂದ ಅಧ್ಯಾಪಕ ಹಾಗೂ ಪತ್ನಿಯನ್ನು ರಕ್ಷಿಸಲಾಯಿತು. ಅವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ರಾಜ್ಯ ರಸ್ತೆಯ ಅಟ್ಟೆಂಗಾನ ಎಂಬಲ್ಲಿ ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಕೋಡೋಂ ಅಂಬೇಡ್ಕರ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ  ಅಧ್ಯಾಪಕ ಹರೀಶ್ (40) ಹಾಗೂ ಅವರ ಪತ್ನಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀ ಡಾಗಿತ್ತು. ಒಡಂಚಾಲ್ ಭಾಗದಿಂದ ಕಾಞಂಗಾಡ್ ಭಾಗಕ್ಕೆ ಸಂಚರಿಸುತ್ತಿದ್ದ ಕಾರು ಅಟ್ಟೆಂಗಾನ ಪೇಟೆಗೆ ಸಮೀಪದ ತಿರುವಿನಲ್ಲಿರುವ ಕಾರಕ್ಕಡಿಯ ಸುಭಾಶ್ ಎಂಬವರ ಮನೆ ಮೇಲೆ  ಕಾರು ಮಗುಚಿದೆ. ಮನೆಯವರು ಹಾಗೂ ಸ್ಥಳೀಯರು ಕೂಡಲೇ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಭಾರೀ ಅಪಾಯ ತಪ್ಪಿದೆ.

Leave a Reply

Your email address will not be published. Required fields are marked *

You cannot copy content of this page