ಮನೆ ಹಿತ್ತಿಲಲ್ಲಿ ಬೃಹತ್  ಕಾಳಿಂಗ ಸರ್ಪ

ಕಾಸರಗೋಡು: ಮನೆ ಹಿತ್ತಿಲಲ್ಲಿ ಬೃಹತ್ ಕಾಳಿಂಗಸರ್ಪವೊಂದು ದಿಢೀರ್ ಪ್ರತ್ಯಕ್ಷಗೊಂಡಿದ್ದು, ಅರಣ್ಯಪಾಲಕರು ಅದನ್ನು ಸೆರೆಹಿಡಿದ ಘಟನೆ ನಡೆದಿದೆ. ಭೀಮನಡಿ ಎಳೇರಿತ್ತಟ್ ಕಡುಪ್ಪಿಲ್ ಸಾಬು ಎಂಬವರ ಹಿತ್ತಿಲಲ್ಲಿ ನಿನ್ನೆ ರಾತ್ರಿ  ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡಿದೆ. ಅದು ಸುಮಾರು ನಾಲ್ಕು ಮೀಟರ್ ಉದ್ದವಿತ್ತು. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಭೀಮನಡಿ ಸೆಕ್ಷನ್‌ನ ಅರಣ್ಯಾಧಿಕಾರಿ ಕೆ.ಎನ್. ಲಕ್ಷ್ಮಣನ್ ನೀಡಿದ ನಿರ್ದೇಶ ಪ್ರಕಾರ ಅರಣ್ಯ ಇಲಾಖೆಯ ರೆಸ್ಕ್ಯೂಗಳಾದ  ಸುನಿಲ್ ಸುರೇಂದ್ರನ್ ಕೋಟಪ್ಪಾರ, ಅನೂಪ್ ಚೀಮೇನಿ, ಗೌತಂ, ಮುರಳಿ ಕೆ ಮಟ್ಟಲಾಯಿ,  ಹರಿಕೃಷ್ಣನ್, ಎಸ್.ಎನ್. ಸಂದೀಪ್ ಎಂಬವರು ಸೇರಿ ಈ ಹಾವನ್ನು ಹಿಡಿದು ಅರಣ್ಯಕ್ಕೆ ಸಾಗಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page