ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು

ಮುಳ್ಳೇರಿಯ: ಜೀಗುಜ್ಜೆ ಕೊಯ್ಯಲೆಂದು ಮರಕ್ಕೆ ಹತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ನೆಟ್ಟಣಿಗೆ ಬಳಿಯ ಮಿತ್ತಜಾಲು ಎಂಬಲ್ಲಿನ ಕೊರಗ ಬೆಳ್ಚಪ್ಪಾಡ ಎಂಬವರ ಪುತ್ರ ರಾಘವ (೪೨) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಈ ತಿಂಗಳ ೧ರಂದು ಸಂಜೆ ಮನೆ ಬಳಿಯ ಬೇರೊಬ್ಬರ ತೋಟದಲ್ಲಿ ಜೀಗುಜ್ಜೆ ಕೊಯ್ಯಲೆಂದು ರಾಘವ ಮರಕ್ಕೆ ಹತ್ತಿದರು. ಈ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನ ಸಂಭವಿಸಿದೆ.

ಮೃತರು ತಂದೆ, ತಾಯಿ ಮೈನ,  ಪತ್ನಿ ಚಂದ್ರಾವತಿ, ಮಕ್ಕಳಾದ ಶ್ರೀಹರಿ, ಆರ್ಯಶ್ರೀ, ಸಹೋದರ- ಸಹೋದರಿ ಯರಾದ ದಾಮೋದರ, ನಾರಾಯಣ, ನಾರಾಯಣಿ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ರಾಘವರ ನಿಧನಕ್ಕೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ನೆಟ್ಟಣಿಗೆ ಬೆಳ್ಳೂರು ಪ್ರಾದೇಶಿಕ ಸಮಿತಿ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

You cannot copy content of this page