ಮಲಯಾಳಂ ಸಿನೆಮಾ ನಟ ಜೋನಿ ನಿಧನ

ಕೊಲ್ಲಂ: ಮಲಯಾಳಂ ಸಿನೆಮಾರಂಗದ ಖ್ಯಾತ ನಟ ಜೋನಿ (೭೧) ನಿಧನ ಹೊಂದಿದರು. ಖಳನಾಯಕ ಹಾಗೂ ಉತ್ತಮ ನಡತೆಯ ಪಾತ್ರ ಸೇರಿದಂತೆ ೧೫೦ರಷ್ಟು ಸಿನೆಮಾದಲ್ಲಿ ಜೋನಿ ಅಭಿನಯಿಸಿದ್ದಾರೆ.

ಕಿರೀಟಂ, ಚೆಂಗೋಲ್, ಒರು ವಡಕನ್ ವೀರಗಾಥ, ಗಾಡ್ ಫಾದರ್, ನಾಡೋಡಿಕಾಟ್, ಇನ್ಸ್‌ಪೆಕ್ಟರ್ ಬಲರಾಮ್ ಇತ್ಯಾದಿ ಸಿನೆಮಾಗಳಲ್ಲಿ ಇವರ ಅಭಿನಯ ಪ್ರೇಕ್ಷಕರ ಭಾರೀ ಗಮನ ಸೆಳೆದಿತ್ತು. ೧೯೭೯ರಲ್ಲಿ ಬಿಡುಗಡೆಗೊಂಡ ‘ನಿತ್ಯವಸಂತಂ’ ಇವರು ಅಭಿನಯಿ ಸಿದ ಮೊದಲ ಚಿತ್ರವಾಗಿತ್ತು. ಕಳೆದ  ವರ್ಷ ಬಿಡುಗಡೆಗೊಂಡ ‘ಮೇ ಪಡಿಯೆನ್’ ಸಿನೆಮಾದಲ್ಲಿ ಇವರ ಜೇಕಬ್‌ರ ಪಾತ್ರ ಭಾರೀ ಪ್ರಶಂಸೆಗೂ ಪಾತ್ರವಾಗಿತ್ತು. ಜೋನಿಯವರ ನಿಧನಕ್ಕೆ ಮಲೆಯಾಳಂ ಸಿನೆಮಾರಂಗದ ಮತ್ತು ಸಾಂಸ್ಕೃತಿಕ ರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page