ಮಲ್ಲ ಕ್ಷೇತ್ರ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ನಿಧನ

ಮಲ್ಲ: ಮಲ್ಲ ಶ್ರೀ ದುರ್ಗಾಪರಮೇ ಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಧಾರ್ಮಿಕ ಮುಂದಾಳು ಆನೆಮಜಲು ವಿಷ್ಣು ಭಟ್ (೬೬) ನಿಧನ ಹೊಂದಿದರು. ನಿನ್ನೆ ರಾತ್ರಿ ೧೦.೩೦ಕ್ಕೆ ಆನೆಮಜಲುನಲ್ಲಿ ರುವ ಸ್ವ-ಗೃಹದಲ್ಲಿ ನಿಧನ ಸಂಭವಿಸಿದೆ. ದಿ| ಅಚ್ಯುತ ಭಟ್- ಸುಮತಿ ಅಮ್ಮ ದಂಪತಿಯ ಪುತ್ರನಾದ ವಿಷ್ಣು ಭಟ್ ಅವರು ಪತ್ನಿ ಸಂಧ್ಯಾ ಭಟ್, ಮಕ್ಕಳಾದ ಡಾ| ದುರ್ಗಾಪ್ರಸಾದ್, ನ್ಯಾಯವಾದಿ ಪ್ರದೀಪ್, ಪ್ರತಿಭ, ಸೊಸೆ ಶ್ರೀಲತ, ಸಹೋದರ- ಸಹೋದರಿಯರಾದ ಸತ್ಯನಾರಾಯಣ ಭಟ್, ಶ್ರೀಧರ ಭಟ್, ರಾಧಾಕೃಷ್ಣ ಭಟ್, ಶಿವರಾಮ ಭಟ್, ಮುರಳೀಧರ ಭಟ್, ನ್ಯಾಯವಾದಿ ಶಶಿಧರ ಆನೆಮಜಲು, ವಿದ್ಯಾಧರ, ವಸುಧಾ ಭಟ್, ಸಾವಿತ್ರಿ, ಲಕ್ಷ್ಮೀದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಇನ್ನೋರ್ವೆ ಸಹೋದರಿ ಸುನಂದ ಎಂಬವರು ಈ ಹಿಂದೆ ನಿಧನರಾಗಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಮನೆ ಹಿತ್ತಿಲಲ್ಲಿ ನಡೆಸಲಾಯಿತು.

Leave a Reply

Your email address will not be published. Required fields are marked *

You cannot copy content of this page