ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ವಾರ್ಷಿಕ ಇಂದಿನಿಂದ
ಮಲ್ಲ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಇಂದಿನಿಂದ ೨೬ರ ವರೆಗೆ ವಿವಿಧ ಕಾರ್ಯಕ್ರಮಗಳೊಂ ದಿಗೆ ಜರಗಲಿದೆ. ಇಂದು ರಾತ್ರಿ ೮ ಗಂಟೆಗೆ ಧ್ವಜಾರೋಹಣ ಬಳಿಕ ಶ್ರೀ ಭೂತಬಲಿ ನಡೆಯಲಿದೆ.
ನಾಳೆಯಿಂದ ೨೩ರ ವರೆಗೆ ಪ್ರತಿದಿನ ಬೆಳಿಗ್ಗೆ ೭.೩೦ಕ್ಕೆ ಶ್ರೀ ಭೂತಬಲಿ, ತುಲಾಭಾರಸೇವೆ, ಮಹಾಪೂಜೆ, ರಾತ್ರಿ ೯ಕ್ಕೆ ಶ್ರೀ ಭೂತಬಲಿ, ಪಾಲಕಿ ಸೇವೆ, ನೃತ್ಯ, ೨೩ರಂದು ರಾತ್ರಿ ೯ಕ್ಕೆ ಶ್ರೀ ಭೂತಬಲಿ ಬಳಿಕ ಅಮ್ಮಂಗೋಡು ಕಟ್ಟೆಪೂಜೆ, (ನಡುದೀಪ ಉತ್ಸವ), ಮಲ್ಲ ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘದವರಿಂದ ಭಜನೆ, ಪಾಲಕಿಸೇವೆ, ನೃತ್ಯ, ೨೪ರಂದು ಬೆಳಿಗ್ಗೆ ೭.೩೦ಕ್ಕೆ ಶ್ರೀ ಭೂತಬಲಿ, ತುಲಾಭಾರಸೇವೆ, ಮಹಾಪೂಜೆ, ರಾತ್ರಿ ೧೦ರಿಂದ ಶ್ರೀ ಭೂತಬಲಿ, ಬೆಡಿ, ರಥೋತ್ಸವ, ನೃತ್ಯ, ಶಯನ, ೨೫ರಂದು ಪ್ರಾತಃ ಶಯನೋದ್ಘಾ ಟನೆ, ಮಂಗಳಾಭಿಷೇಕ, ಶ್ರೀ ಭೂತಬಲಿ, ಅವಭೃತಸ್ನಾನ, ಬಟ್ಲುಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ೨೬ರಂದು ಬೆಳಿಗ್ಗೆ ೧೦ಕ್ಕೆ ಶ್ರೀ ಧೂಮಾವತೀ ದೈವನೇಮ ನಡೆಯಲಿದೆ.