ಮಳೆಯ ಕೊರತೆ: ಬಾವಿಕೆರೆ ಅಣೆಕಟ್ಟು ಶಟರ್ ಎರಡು ತಿಂಗಳ ಮುಂಚಿತ ಮುಚ್ಚಲು ಆಲೋಚನೆ

ಬೋವಿಕ್ಕಾನ: ಮಳೆ ಇದೇ ರೀತಿಯಲ್ಲಿ ಮುಂದುವರಿಯುವುದಾ ದರೆ ಬಾವಿಕೆರೆ ಅಣೆಕಟ್ಟಿನ ಶಟರ್‌ನ್ನು ಮುಂದಿನ ತಿಂಗಳಲ್ಲಿಯೇ ಮುಚ್ಚಲಿರು ವ ಕಾರ್ಯ ನೀರಾವರಿ ಇಲಾಖೆಯ ಪರಿಗಣನೆಯಲ್ಲಿದೆ. ಹೊಳೆಯ ನೀರ ಹರಿವು, ಮಳೆಯ ಸ್ಥಿತಿಯನ್ನು ಪರಿಗಣಿಸಿ ಅಂತಿಮ ತೀರ್ಮಾನ ಉಂಟಾಗಲಿದೆ. ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಸಾಮಾನ್ಯವಾಗಿ ಶಟರ್‌ಗಳನ್ನು ಮುಚ್ಚಲಾಗುತ್ತಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾದ ಕಾರಣ ಈ ಬಗ್ಗೆ ನೀರಾವರಿ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಅಣೆಕಟ್ಟಿನಲ್ಲಿ ಅರ್ಧಭಾಗ ತೆರೆದು ಬದಲಿಸಬಹುದಾದ ಫೈಬರ್ ಶಟರ್‌ಗಳು ಹಾಗೂ ಉಳಿದರ್ಧ ಯಾಂತ್ರಿಕ ಶಟರ್‌ಗಳಾಗಿವೆ. ಪ್ರತಿ ವರ್ಷವೂ ಕರಾರು ನೀಡಿ ಫೈಬರ್ ಶಟರ್‌ಗಳನ್ನು ಸ್ಥಾಪಿಸಲಾಗುವುದು. ಹಾಗೂ ಮಳೆಗಾಲದಲ್ಲಿ ತೆಗೆದು ಬದಲಿಸುವುದ. ಈ ಬಾರಿ ಶಟರ್ ಸ್ಥಾಪಿಸಲು ಆರ್ಥಿಕ ಒಪ್ಪಿಗೆ ಲಭಿಸಿದೆ. ಆಡಳಿತಾನುಮತಿ, ತಾಂತ್ರಿಕ ಅನುಮತಿ ಪಡೆದು ಕೂಡಲೇ ಟೆಂಡರ್ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಕಳೆದ ವರ್ಷ ಟೆಂಡರ್ ಕ್ರಮಗಳು ವಿಳಂಬವಾದ ಕಾರಣ ಶಟರ್ ಸ್ಥಾಪಿಸಲು ತಡವಾಗಿರುವುದು ಸಮಸ್ಯೆಯಾಗಿತ್ತು. ಈಗ ನದಿಯಲ್ಲಿ ನೀರ ಹರಿವು ಇದ್ದರೂ ಜಲಮಟ್ಟದಲ್ಲಿ ಗಂಭೀರ ಕೊರತೆ  ಇದೆ. ಮುಂದಿನ ದಿನಗಳಲ್ಲಿ ಮಳೆ ಬಿರುಸಾದರೆ ನೀರು ಹೆಚ್ಚಬಹುದು. ಮಳೆ ಕಡಿಮೆಯಾದ ಕಾರಣ ನೀರಿನ ಉಪಯೋಗವೂ ಹೆಚ್ಚಾಗಿರುವು ದರಿಂದ ಎರಡು ತಿಂಗಳ ಮುಂಚಿತ ವಾಗಿಯೇ ಶಟರ್ ಮುಚ್ಚಲು ಅಧಿಕಾರಿಗಳು ಚಿಂತಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page