ಮವ್ವಾರಿನಲ್ಲಿ ಬೀದಿ ದೀಪವಿಲ್ಲ: ಕತ್ತಲಾವರಿಸುತ್ತಿದೆ ಎಂದು ಸ್ಥಳೀಯರು
ಮವ್ವಾರು: ಪೇಟೆಯಲ್ಲಿ ಬೀದಿ ದೀಪದ ಕೊರತೆಯಿಂದ ಸಂಜೆಯಾಗುವಾಗಲೇ ಕತ್ತಲಾವರಿಸುತ್ತಿದೆ. ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ವಿವಿಧ ಕಡೆ ಬೀದಿ ದೀಪ ಅಳವಡಿಸಲಾಗಿದ್ದರೂ ಮವ್ವಾರ್ ಪೇಟೆಯ ಒಂದು ಭಾಗ ಕತ್ತಲಾವರಿಸುತ್ತಿದೆ. ಇಲ್ಲಿ ಚಿಕಿತ್ಸಾಲಯ, ವ್ಯಾಪಾರ ಕೇಂದ್ರಗಳು, ಅಂಗನವಾಡಿ, ಹಿರಿಯ ನಾಗರಿಕರ ವಸತಿಗೃಹಗಳಿದ್ದು, ಕತ್ತಲೆ ಆವರಿಸುವ ಕಾರಣ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ.
ರಸ್ತೆಯ ಅನಗತ್ಯ ಸ್ಥಳಗಳಲ್ಲೂ ಬೀದಿ ದೀಪ ಅಳವಡಿಸಿದ್ದು, ಕಂಡು ಬರುತ್ತಿದ್ದು, ಆದರೆ ಅಗತ್ಯದ ಕಡೆಯಲ್ಲಿ ಸ್ಥಾಪಿಸದಿರುವುದು ಸರಿಯಲ್ಲವೆಂದು ಸ್ಥಳೀಯರು ತಿಳಿಸಿದ್ದು, ಇಲ್ಲಿ ಕನಿಷ್ಟ ಮೂರು ದೀಪವನ್ನಾದರೂ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.