ಮವ್ವಾರು ಶ್ರೀ ಕೃಷ್ಣ ಭಜನಾ ಮಂದಿರ ಪ್ರತಿಷ್ಠಾ ವಾರ್ಷಿಕೋತ್ಸವ 11ರಂದು
ಮವ್ವಾರು: ಇಲ್ಲಿನ ಶ್ರೀಕೃಷ್ಣ ಭಜನಾಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ ಈ ತಿಂಗಳ 11ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಕೂಡಾ ಇದೇ ಸಂದರ್ಭದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 6.42ಕ್ಕೆ ದೀಪ ಪ್ರತಿಷ್ಠೆ, ಗಣಪತಿ ಹೋಮ, 8ಕ್ಕೆ ಮಂದಿರ ಮುಂಭಾಗದ ಶಾಶ್ವತ ಚಪ್ಪರ ಲೋಕಾರ್ಪಣೆ, 8.15ರಿಂದ ವಿವಿಧ ತಂಡಗಳಿAದ ಭಜನೆ, 10ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ, 10.30ರಿಂದ ನಾಗ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಮಂದಿರ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ್ ರೈ ಮಠದಮೂಲೆ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಡಾ. ರಾಧಾಕೃಷ್ಣ ಬೆಳ್ಳೂರು ಸಾಂಸ್ಕೃತಿಕ ಉಪನ್ಯಾಸ ನೀಡುವರು. ಹರಿನಾರಾಯಣ ಶಿರಂತಡ್ಕ, ಎಸ್.ಎನ್. ಮಯ್ಯ ಭಾಗವಹಿಸುವರು. ಸಂಜೆ 4ರಿಂದ ಮಂದಿರದ ಮಾತೃಮಂಡಳಿ ಸದಸ್ಯೆಯರಿಂದ ತಿರುವಾದಿರ, ಕೈಕೊಟ್ಟಿ ಕಳಿ, 4.45ರಿಂದ ಕುಣಿತ ಭಜನೆ, 6.30ಕ್ಕೆ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.