ಮಸೀದಿಗೆ ನುಗ್ಗಿ ಉಸ್ತಾದ್ರ ಹಣ, ಮೊಬೈಲ್ ಫೋನ್ ಕಳವು: ಇಬ್ಬರ ಸೆರೆ
ಕಣ್ಣೂರು: ಮಸೀದಿಗೆ ನುಗ್ಗಿ ಉಸ್ತಾದ್ರ ಹಣ ಹಾಗೂ ಮೊಬೈಲ್ ಫೋನ್ಗಳನ್ನು ಕಳವುಗೈದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಮುಟ್ಟಂ ವೆಂಙರ ಮೈಲಾಂಜಿಕ್ಕಾಲ್ ಎಂಬಲ್ಲಿನ ಎಂ.ಕೆ. ಮುಹಮ್ಮದ್ ಫಯಾಸ್ (೧೯), ಕೊಟ್ಟಿಲ ನರಿಕ್ಕೋಡು ಹಫೀಸಾ ಮಂ ಜಿಲ್ನ ಕೆ.ಟಿ. ಮುಹಮ್ಮದ್ ಹಿಫಾಸ್ (೧೮) ಎಂಬಿವರನ್ನು ಪಳಯಂಗಾಡಿ ಪೊಲೀಸರು ಬಂಧಿಸಿದ್ದಾರೆ. ಕೆಲವು ವಾರಗಳ ಹಿಂದೆ ಮುಟ್ಟಂ ಜುಮಾ ಮಸೀದಿಯ ಮೇಲಂತಸ್ತಿನಲ್ಲಿ ವಾಸಿಸುವ ಉಸ್ತ್ತಾದ್ ಮಲಪ್ಪುರಂ ನಿವಾಸಿಯಾದ ಹನೀಸ್ರ ಕೊಠಡಿಗೆ ನುಗ್ಗಿ ಕಳವು ನಡೆಸಲಾಗಿದೆ. ಕೊಠಡಿಯ ಬೀಗ ಮುರಿದು ಒಳಗೆ ನುಗ್ಗಿ ಪೆಟ್ಟಿಗೆಯಲ್ಲಿದ್ದ ೪೪ ಸಾವಿರ ರೂಪಾಯಿ ಮೌಲ್ಯದ ೨ ಮೊಬೈಲ್ ಫೋನ್ಗಳು, ೨೮೦೦ ರೂ., ೩೩೦ ಸೌದಿ ರಿಯಾಲ್ ಎಂಬಿವುಗಳನ್ನು ಕಳವುಗೈದಿರುವುದಾಗಿ ಕೇಸು ದಾಖಲಿಸಲಾಗಿದೆ. ಮಸೀದಿ ಕಮಿಟಿ ಸೆಕ್ರೆಟರಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸು ತ್ತಿದ್ದಂತೆ ಈ ಇಬ್ಬರು ಆರೋಪಿಗಳನ್ನು ಬೇರೊಂದು ಕಳವು ಪ್ರಕರಣಕ್ಕೆ ಸಂಬಂಧಿಸಿ ಚಂದೇರ ಪೊಲೀಸರು ಬಂಧಿಸಿದ್ದರು. ಚೆರ್ವತ್ತೂರು ತುರುತ್ತಿಯ ಉಸ್ತಾದ್ರ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿತ್ತು. ಇವರನ್ನು ತನಿಖೆಗೊಳಪಡಿಸಿದಾಗ ಪಳಯಂಗಾಡಿ ಯಲ್ಲೂ ಉಸ್ತಾದ್ರ ಮೊಬೈಲ್ ಫೋನ್, ಹಣ ಕಳವುಗೈದಿರುವುದನ್ನು ಒಪ್ಪಿಕೊಂಡಿದ್ದಾರೆ. ರಿಮಾಂಡ್ನಲ್ಲಿದ್ದ ಆರೋಪಿಗಳನ್ನು ಕಸ್ಟಡಿಗೆ ತೆಗೆದು ಮಾಹಿತಿ ಸಂಗ್ರಹಿಸಿದ ಬಳಿಕ ಬಂಧನ ದಾಖಲಿಸಲಾಗಿದೆ.