ಮಸೀದಿಯಿಂದ ಹೊರಕ್ಕೆ ಕರೆದು ಯುವಕನಿಗೆ ಹಲ್ಲೆ ಮೂವರ ವಿರುದ್ಧ ಕೇಸು

ಉಪ್ಪಳ: ಯುವಕನನ್ನು ಮಸೀದಿಯಿಂದ ಹೊರಕರೆದು ಹಲ್ಲೆಗೈದ ಆರೋಪದಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಬಂಗ್ರಮಂಜೇಶ್ವರ ಕಾಡಿಯಾರ್ ಬುಶ್ರಾ ಮಂಜಿಲ್‌ನ ಸೈಫುದ್ದೀನ್ (೨೯) ಎಂಬವರಿಗೆ ನಿನ್ನೆ ಸಂಜೆ ತಂಡ ಹಲ್ಲೆಗೈದುದಾಗಿ ದೂರಲಾಗಿದೆ.  ಈ ಸಂಬಂಧ ರಿಯಾಸ್, ಕಸಾಯಿ ಅಲಿ ಹಾಗೂ ಇನ್ನೋರ್ವನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ನಿನ್ನೆ ಸಂಜೆ ೪ ಗಂಟೆಗೆ ಅಂಗಡಿಪದವು ಮಸೀದಿಯಲ್ಲಿದ್ದ ಸೈಫುದ್ದೀನ್‌ರನ್ನು ತಂಡ ಹೊರಕ್ಕೆ ಕರೆದು ಬಳಿಕ ಹಲ್ಲೆಗೈದಿರುವುದಾಗಿ ದೂರಲಾಗಿದೆ.  ಹಣದ ವ್ಯವಹಾರವೇ ಹಲ್ಲೆಗೆ ಕಾರಣವೆಂದು ಹೇಳಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆಯೆಂದು  ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page