ಮಸ್ಟರಿಂಗ್ ಮಾರ್ಚ್ 31ರೊಳಗೆ ಪೂರ್ತಿಗೊಳಿಸಲು ನಿರ್ದೇಶ
ತಿರುವನಂತಪುರ: ಆದ್ಯತಾ ವಿಭಾಗ ರೇಶನ್ ಕಾರ್ಡ್ ಫಲಾನು ಭವಿಗಳ ಮಸ್ಟರಿಂಗ್ ಮಾರ್ಚ್ 31ರ ಮುಂಚೆ ಪೂರ್ತಿಗೊಳಿಸಬೇಕೆಂದು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ತಿಳಿಸಿದೆ. ರಾಜ್ಯದಲ್ಲಿ ಇನ್ನು 12 ಲಕ್ಷ ಫಲಾನುಭವಿಗಳ ಮಸ್ಟರಿಂಗ್ ನಡೆಸಲು ಬಾಕಿಯಿದೆ. ಇವರ ಮನೆಗಳಿಗೆ ಭೇಟಿ ನೀಡಿ ಮಸ್ಟರಿಂಗ್ ನಡೆಸಲು ಆಹಾರ ಇಲಾಖೆ ಅಧಿ ಕಾರಿಗಳಿಗೆ ಸಚಿವ ಜಿ.ಆರ್.ಅನಿಲ್ ನಿರ್ದೇಶಿಸಿದ್ದಾರೆ. ಇದೇ ವೇಳೆ ಇದುವರೆಗೆ ಮಸ್ಟರಿಂಗ್ ನಡೆಸದಿರುವ ಕಾರಣಗಳನ್ನು ತಿಳಿಸುವಂತೆಯೂ ತಿಳಿಸಲಾಗಿದೆ.