ಮಹಾ ಕುಂಭಮೇಳ ನಿರ್ವಹಣೆಗಾಗಿ 16000 ಸ್ವಯಂ ಸೇವಕರನ್ನು ನೇಮಿಸಿದ ಆರ್‌ಎಸ್‌ಎಸ್
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭಗೊಂಡಿರುವ ಮಹಾ ಕುಂಭಮೇಳದಲ್ಲಿ ಕೋಟಿಗಟ್ಟಲೆ ಭಕ್ತರ ಮಹಾಪೂರವೇ ಹರಿದು ಬರತೊಡಗಿರುವ ಹಿನ್ನೆಲೆಯಲ್ಲಿ ಭಕ್ತರ ಸುಗಮ ಸಂಚಾರ ನಿರ್ವಹಣೆಗಾಗಿ ಆರ್‌ಎಸ್‌ಎಸ್ 16000 ಸ್ವಯಂ ಸೇವಕರನ್ನು ಸೇವೆಗಾಗಿ ನಿಯೋಜಿಸಿದೆ.
ದಿನಗಳ ಹಿಂದೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ಸೇರಿದ ಹಿನ್ನೆಲೆಯಲ್ಲಿ ಕಾಲ್ತುಳಿತ ಉಂಟಾಗಿ 30 ಭಕ್ತರು ಸಾವನ್ನಪ್ಪಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹೀಗಾಗಿ ಅದನ್ನು ಗಮನದಲ್ಲಿರಿಸಿಕೊಂಡು ಇನ್ನು ಮುಂದೆ ಇಂತಹ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಲು ಆರ್‌ಎಸ್‌ಎಸ್ ಸೇವೆಗಾಗಿ ಇಷ್ಟೊಂದು ಸ್ವಯಂ ಸೇವಕರನ್ನು ನೇಮಿಸಿದೆ.