ಮಹಿಳೆ ನಾಪತ್ತೆ-ದೂರು

ಕುಂಬಳೆ: ರಾತ್ರಿ ನಿದ್ರಿಸಿದ್ದ ಮಹಿಳೆ ಬಳಿಕ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಮೂಲತಃ ತಮಿಳುನಾಡು ನಿವಾಸಿ ಯೂ ಹಲವು ವರ್ಷಗಳಿಂದ ಕುಟುಂಬ ಸಮೇತ ಶಾಂತಿಪಳ್ಳದಲ್ಲಿ ವಾಸಿಸುವ ಜಯಪಾಲ್ ಎಂಬವರ ಪತ್ನಿ ರಾಜಲಕ್ಷ್ಮಿ (೫೨) ನಾಪತ್ತೆ ಯಾಗಿ ರುವುದಾಗಿ ದೂರಲಾಗಿದೆ. ಈ ತಿಂಗಳ ೧೬ರಂದು ರಾತ್ರಿ ನಿದ್ರಿಸಿದ್ದ ರಾಜಲಕ್ಷ್ಮಿ ೧೭ರಂದು ಬೆಳಿಗ್ಗೆ ನೋಡಿದಾಗ ನಾಪತ್ತೆಯಾ ಗಿದ್ದಾರೆನ್ನಲಾಗಿದೆ. ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ ವೆನ್ನಲಾಗಿದೆ. ಈ ಬಗ್ಗೆ ಅವರ ಪುತ್ರ ಸುದಲಾಮಣಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page