ಮಾಜಿ ಶಾಸಕ ಪಿ. ರಾಜು ನಿಧನ
ಕೊಚ್ಚಿ: ಸಿಪಿಐ ನೇ ತಾರ, ಮಾ ಜಿ ಶಾಸಕ ಪಿ. ರಾಜು (73) ನಿಧನ ಹೊಂದಿದರು. ಇವರು 1991 ಹಾಗೂ 1996ರಲ್ಲಿ ಪರವೂರು ವಿಧಾನಸಭಾ ಕ್ಷೇತ್ರದಿಂದ ಶಾಸಕ ರಾಗಿ ಆಯ್ಕೆಗೊಂಡಿದ್ದರು. ಎರಡು ಬಾರಿ ಸಿಪಿಐಯ ಎರ್ನಾಕುಳಂ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಕೌನ್ಸಿಲ್ ಸದಸ್ಯ, ಆ ಪಕ್ಷದ ಮುಖವಾಣಿ ಯಾದ ಜನ ಯುಗಂ ಪತ್ರಿಕೆಯ ಕೊಚ್ಚಿ ಘಟಕದ ಮೆನೇಜರ್ ಆಗಿಯೂ ಸೇವೆ ಸಲ್ಲಿಸಿದ್ದರು.
ಅಸೌಖ್ಯ ನಿಮಿತ್ತ ರಾಜುರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿ ತ್ತಾದರೂ ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟರು. ಇವರು ಇತ್ತೀಚೆಗೆ ಸಕ್ರಿಯ ರಾಜಕೀಯ ದಿಂದ ದೂರ ಸರಿದು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು.