ಮಾಜಿ ಸಚಿವ, ಶಾಸಕ ಎ.ಸಿ. ಮೊದೀನ್ ನಿವಾಸ, ಕಚೇರಿಗೆ ಇ.ಡಿ. ದಾಳಿ
ತೃಶೂರು: ಮಾಜಿ ಸಚಿವ ಹಾಗೂ ಶಾಸಕರೂ ಆಗಿರುವ ಸಿಪಿಎಂ ನೇತಾರ ಎ.ಸಿ. ಮೊದೀನ್ರ ಮನೆಗೆ ಇಂದು ಬೆಳಿಗ್ಗೆ ಎನ್ಫೋರ್ಸ್ಮೆಂಟ್ (ಇಡಿ) ದಾಳಿ ನಡೆಸಿದೆ.
ವಡಕಾಂಚೇರಿ ತೆಕ್ಕುಂಕರೆ ಯಲ್ಲಿರುವ ಮೊದೀನ್ರ ಮನೆಗೆ ಕೊಚ್ಚಿಯಿಂದ ಬಂದ ೧೨ ಮಂದಿ ಇ.ಡಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ. ಮಾತ್ರವಲ್ಲ ಕುನ್ನಂಕುಳದಲ್ಲಿರುವ ಎ.ಸಿ. ಮೊದೀನ್ರ ಕಚೇರಿಗೂ ಇ.ಡಿ ದಾಳಿ ನಡೆಸಿದೆ. ಕರುವಣ್ಣೂರು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಎ.ಸಿ ಮೊದೀನ್ ಅವರ ಸಂಬಂಧಿಕರು ಒಳಪಟ್ಟಿರುವುದಾಗಿ ಈ ಹಿಂದೆಯೇ ಆರೋಪ ಉಂಟಾಗಿತ್ತು. ಅದಕ್ಕೆ ಸಂಬಂಧಿಸಿ ಅವರ ನಿವಾಸ ಮತ್ತು ಕಚೇರಿಗೆ ಇ.ಡಿ ಇಂದು ದಾಳಿ ನಡೆಸಿದೆ.