ಪಾಯಿಖಾನೆ ಮಲಿನ ಜಲವನ್ನು ಉಪೇಕ್ಷಿಸಲು ತಲುಪಿದ ಟ್ಯಾಂಕರ್ ಲಾರಿ ವಶಕ್ಕೆ

ಮಂಜೇಶ್ವರ: ಪಾಯಿಖಾನೆ ಮಲಿನ ಜಲವನ್ನು ಟ್ಯಾಂಕರ್ ಲಾರಿಯಲ್ಲಿ ತಂದು ಉಪೇಕ್ಷಿಸಲು ಯತ್ನಿಸಿದಾಗ ಊರವರು ತಡೆಯೊಡ್ಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಮೊರತ್ತಣೆ ಬಳಿಯ ಬಟ್ಯಪದವುನಲ್ಲಿ ಮೊನ್ನೆ ಮುಂಜಾನೆ 3ಗಂಟೆಗೆ ಟ್ಯಾಂಕರ್ ಮೂಲಕ ಮಲಿನ ಜಲ ತಂದು ಕಲ್ಲಿನ ಕೋರೆಯ ಹೊಂಡಕ್ಕೆ ಉಪೇಕ್ಷಿಸಲು ಯತ್ನಿಸಲಾಗಿತ್ತು. ಇದು ಊರವರ ಗಮನಕ್ಕೆ ಬಂದಿದ್ದು, ಕೂಡಲೆÃ ಅಲ್ಲಿಗೆÉ ತಲುಪಿದ ಅವರು ತಡೆಯೊಡ್ಡಿದ್ದಾರೆ. ಬಳಿಕ ಅವರು ನೀಡಿದ ಮಾಹಿತಿಯಂತೆ ಮಂಜೇಶ್ವರ ಠಾಣೆಯ ಸಿ.ಐ ಕೆ. ರಾಜೀವ್ ಕುಮಾರ್ ನೇತೃತ್ವದ ಪೋಲೀಸರು ತಲುಪಿ ಟ್ಯಾಂಕರ್ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬAಧ ಚಾಲಕ ಸುಬ್ಬಯ್ಯಕಟ್ಟೆ ನಿವಾಸಿ ಅಬ್ದುಲ್‌ರಹಿಮಾನ್ [34] ಎಂಬಾತನ ವಿರುದ್ದ ಕೇಸು ದಾಖಲಿಸಿದ್ದಾರೆ.

You cannot copy contents of this page