ಮಾನಂತವಾಡಿಯಲ್ಲಿ ಅಬಕಾರಿ ಕಾರ್ಯಾಚರಣೆ : ಎಂಡಿಎಂಎ ಸಹಿತ ಕಾಸರಗೋಡಿನ ಇಬ್ಬರ ಸೆರೆ: ಕಾರು ವಶ
ಕಾಸರಗೋಡು: ವಯನಾಡು ಜಿಲ್ಲೆಯ ಮಾನಂತವಾಡಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಮಾರಕ ಮಾದಕದ್ರವ್ಯವಾದ ಎಂಡಿಎಂಎ ಸಹಿತ ಕಾಸರಗೋಡಿನ ಇಬ್ಬರನ್ನು ಬಂಧಿಸಲಾಗಿದೆ. ಕಾಸರ ಗೋಡು ಚೆರ್ಕಳ ಬಂಬ್ರಾಣಿ ವೀಟಿಲ್ ಕೆ.ಎಂ. ಜಾಬೀರ್ (33) ಮತ್ತು ಮುಳಿಯಾರು ನುಸ್ರತ್ ನಗರದ ಮೂಲಡ್ಕ ವೀಟಿಲ್ ಮೊಹಮ್ಮದ್ ಕುಂಞಿ (36) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. 6.897 ಗ್ರಾಂ ಎಂಡಿಎಂಎ ಯನ್ನು ಇವರಿಂದ ಪತ್ತೆಹಚ್ಚಿ ವಶಪಡಿಸಲಾಗಿದೆ. ಮಾದಕದ್ರವ್ಯ ಸಾಗಿಸಲು ಆರೋಪಿಗಳು ಬಳಸಿದ ಕಾರು ಮತ್ತು ಅವರ ಮೊಬೈಲ್ ಫೋನ್‌ಗಳನ್ನೂ ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಬಂಧಿತ ಆರೋಪಿಗಳ ಪೈಕಿ ಜಾಬೀರ್‌ನ ಕಾಸರಗೋಡಿನಲ್ಲಿ ದಾಖಲಿಸಲಾದ ಮಾದಕ ದ್ರವ್ಯ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾದಕದ್ರವ್ಯ ಪತ್ತೆಹಚ್ಚಲು ಅಬಕಾರಿ ಇಲಾಖೆ ಆರಂಭಿಸಿರುವ ಸ್ಪೆಷಲ್ ಡ್ರೈವ್‌ನಂತೆ ಮಾನಂತವಾಡಿ ಎಕ್ಸೈಸ್ ಇನ್ಸ್‌ಪೆಕ್ಟರ್ ಕೆ. ಶಶಿಯವರ ನೇತೃತ್ವದ ಅಬಕಾರಿ ತಂಡ ಮಾನಂತವಾಡಿ ತಪಾಸಣಾ ಕೇಂದ್ರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದೆ.