ಮಾನ್ಯದಲ್ಲಿ ಸಿಡಿಲಿನ ಆಘಾತ: ಮನೆಗೆ ಹಾನಿ; ಮನೆಯೊಡೆಯನಿಗೆ ಗಾಯ

ಮಾನ್ಯ: ಮಾನ್ಯ ಬಳಿ ಇಂದು ಬೆಳಿಗ್ಗೆ ಸಿಡಿಲಿನ ಆಘಾತದಿಂದ ಮನೆಗೆ ಹಾನಿಯುಂಟಾಗಿದೆ. ಮನೆಯೊಳಗಿದ್ದ ವ್ಯಕ್ತಿ ಗಾಯಗೊಂಡಿದ್ದಾರೆ.

ಮಾನ್ಯ ಬಳಿ ಮೇಗಿನಡ್ಕದಲ್ಲಿ ಇಂದು ಬೆಳಿಗ್ಗೆ 6.30 ವೇಳೆ ಈ ಘಟನೆ ನಡೆದಿದೆ. ಮೇಗಿನಡ್ಕದ ನಾರಾಯಣ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದಿದೆ. ಇದರಿಂದ ನಾರಾಯಣ ನಾಯ್ಕ ಗಾಯಗೊಂಡಿ ದ್ದಾರೆ. ಮನೆಯ ಕೊಠಡಿಯೊಳಗೆ ಕಿಟಕಿ ಸಮೀಪ ನಾರಾಯಣ ನಾಯ್ಕ ನಿದ್ರಿಸಿದ್ದರು. ಈ ವೇಳೆ ಸಿಡಿಲಿನ ಆಘಾತವುಂಟಾಗಿದೆ. ಮನೆಯ ಕಿಟಿಕಿ, ಗೋಡೆಗೆ ಹಾನಿಯುಂಟಾಗಿದೆ. ಅಲ್ಲದೆ ಮೀಟರ್ ಸಹಿತ ವಿದ್ಯುತ್ ವಯ ರಿಂಗ್ ಉರಿದು ನಾಶಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page