ಮಾಹಿತಿ ಹಕ್ಕು ಪ್ರಕಾರದ ಅರ್ಜಿಗೆ ಉತ್ತರ ನೀಡದ ಡಿವೈಎಸ್‌ಪಿಗೆ ಜುಲ್ಮಾನೆ

ಕಾಸರಗೋಡು: ಮಾಹಿತಿ ಹಕ್ಕು ಕಾನೂನು ಪ್ರಕಾರ ಸಲ್ಲಿಸಿ ಅರ್ಜಿ ಪ್ರಕಾರ ಉತ್ತರ ನೀಡದ ಡಿವೈಎಸ್‌ಪಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 2000 ರೂ. ಜುಲ್ಮಾನೆ ವಿಧಿಸಿದೆ. ಕಲ್ಪೆಟ್ಟ ನರ್ಕೋಟಿಕ್ಸ್ ಸೆಲ್ ಡಿವೈಎಸ್‌ಪಿ ಕಾಸರಗೋಡು ನಿವಾಸಿಯಾಗಿರುವ ವಿ.ಕೆ. ವಿಶ್ವಂಭರನ್ ರಿಗೆ ಈ ಜುಲ್ಮಾನೆ ವಿಧಿಸಲಾಗಿದೆ.

ಹೊಸದುರ್ಗ ಮುಟ್ಟಿಚ್ಚಿರ ನಿವಾಸಿ ಗುರುಪುರ ಮದನ ಎಂಬವರು ನೀಡಿದ ದೂರಿನ ಪ್ರಕಾರ ಆಯೋಗ ಡಿವೈಎಸ್‌ಪಿಗೆ ಈ ಜುಲ್ಮಾನೆ ವಿಧಿಸಿದೆ. ವಿಶ್ವಂಭರನ್ ಅವರು ಈ ಹಿಂದೆ ಬೇಕಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಮಾಹಿತಿ ಹಕ್ಕು ಕಾನೂನು ಪ್ರಕಾರ ಅವರಿಗೆ  ಮದನ ಅರ್ಜಿ ಸಲ್ಲಿಸಿದ್ದರು.  ಆದರೆ ಅದಕ್ಕೆ ಉತ್ತರ ನೀಡದ ತಪ್ಪಿಗೆ ಆಯೋಗ ವಿಶ್ವಂಭರನ್‌ರಿಗೆ ಈ ಜುಲ್ಮಾನೆ ವಿಧಿಸಿದೆ. ಜುಲ್ಮಾನೆ ಪಾವತಿ ಸದೇ ಇದ್ದಲ್ಲಿ ಆ ಮೊತ್ತವನ್ನು ವೇತನ ದಿಂದ ವಸೂಲಿ ಮಾಡುವಂತೆಯೂ ಆಯೋಗ ಆದೇಶ ನೀಡಿದೆ.

Leave a Reply

Your email address will not be published. Required fields are marked *

You cannot copy content of this page