ಮಿತಿಗಿಂತ ಹೆಚ್ಚು ಮಕ್ಕಳ ಹೇರಿ ಸಂಚರಿಸಿದ ವಾಹನಗಳಿಗೆ ಕಡಿವಾಣ

ಕಾಸರಗೋಡು: ಜಿಲ್ಲೆಯ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಒತ್ತೊತ್ತಾಗಿ ಹೇರಿ ಸಂಚರಿಸುವುದರ ವಿರುದ್ಧ ಕಂದಾಯ- ಮೋಟಾರು ವಾಹನ ಇಲಾಖೆಗಳ ನೇತೃತ್ವದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಕಾಸರಗೋಡು- ಹೊಸದುರ್ಗ ತಾಲೂಕಿನಲ್ಲಿ ನಿನ್ನೆ ನಡೆಸಿದ ತಪಾಸಣೆಯಲ್ಲಿ ೨೮ ವಾಹನಗಳನ್ನು ವಶಪಡಿಸಲಾಗಿದೆ. ೧೧,೦೦೦ ದಂಡ ವಸೂಲಿ ಮಾಡಲಾಗಿದೆ. ಕಂದಾಯ- ಆರ್‌ಟಿಒ, ಎನ್‌ಫೋರ್ಸ್‌ಮೆಂಟ್ ತಂಡ ಎಂಬಿವುಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಕಾಸರಗೋಡು ತಾಲೂಕಿನಲ್ಲಿ ಆರ್‌ಡಿಒ ಅತುಲ್ ಎಸ್. ನಾಥ್‌ರ ನೇತೃತ್ವದಲ್ಲಿಯೂ  ಹೊಸದುರ್ಗ ತಾಲೂಕಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಸೂಫಿಯಾನ್ ಅಹಮ್ಮದ್‌ರ ನೇತೃತ್ವದಲ್ಲೂ ತಪಾಸಣೆ ನಡೆಸಲಾಗಿದೆ. ಹೊಸದುರ್ಗ ತಾಲೂಕಿನಲ್ಲಿ ೧೬ ಶಾಲೆಯ ವಾಹನಗಳನ್ನು ಪರಿಶೀಲಿಸಲಾಗಿದೆ.

ಒಂದರಲ್ಲಿ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಹೇರಿರುವುದನ್ನು ಪತ್ತೆಹಚ್ಚಿ ೧೫೦೦ ರೂ. ದಂಡ ವಸೂಲಿ ಮಾಡ ಲಾಗಿದೆ. ಜೋಯಿಂಟ್ ಆರ್‌ಟಿಒ ಬಿಜು, ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್‌ಗಳಾದ ಸಾಜು ಫ್ರಾನ್ಸಿಸ್, ಜಯನ್, ಎ.ಎಂ. ವಿ.ಐ.ಗಳಾದ ಸಿ.ವಿ.ಜಿಜೋ ವಿಜಯ್, ಸುಧೀಶ್, ಪಿ.ವಿ. ವಿಜೇಶ್, ವಿನೀತ್ ಎಂಬಿವರು ಭಾಗವ ಹಿಸಿದರು. ಕಾಸರಗೋಡು ತಾಲೂಕಿನಲ್ಲಿ ೧೨ ವಾಹನಗಳನ್ನು ಪರಿಶೀಲಿಸ ಲಾಗಿದೆ. ಎಂಟರಲ್ಲಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಹತ್ತಿಸಿಕೊಂಡು ಸಂಚರಿಸಿರುವುದನ್ನು ಪತ್ತೆಹಚ್ಚಲಾಗಿದೆ. ಇದರಿಂದ ೯೫೦೦ ರೂ. ದಂಡ ವಸೂಲಿ ಮಾಡಲಾಯಿತು.

Leave a Reply

Your email address will not be published. Required fields are marked *

You cannot copy content of this page