ಮಿನಿಲಾರಿ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಇರಿಯಣ್ಣಿ ನಿವಾಸಿ ಮೃತ್ಯು
ಹೊಸದುರ್ಗ: ಮಿನಿ ಲಾರಿ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಇರಿಯಣ್ಣಿ ನಿವಾಸಿ, ಹಲವು ವರ್ಷಗಳಿಂದ ಪೂಚಕ್ಕಾಡ್ ಆಲಿಕ್ಕೋಡನ್ನಲ್ಲಿ ವಾಸಿಸುತ್ತಿದ್ದ ವೈ. ಕೃಷ್ಣನ್ ಬೆಳ್ಚಪ್ಪಾಡ (೬೧) ಮೃತಪಟ್ಟರು. ಈ ತಿಂಗಳ ೯ರಂದು ರಾತ್ರಿ ೭.೩೦ಕ್ಕೆ ಪೂಚಕ್ಕಾಡ್ನಲ್ಲಿ ರಸ್ತೆ ಅಡ್ಡ ದಾಟುವಾಗ ಮಿನಿ ಲಾರಿ ಢಿಕ್ಕಿ ಹೊಡೆದು ಗಾಯಗೊಂಡಿ ದ್ದರು. ಬಳಿಕ ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಹಲವು ದೈವಸ್ಥಾನಗಳಲ್ಲಿ ಬೆಳ್ಚಪ್ಪಾಡ ರಾಗಿದ್ದರು.
ಮೃತರು ಪತ್ನಿ ವಸಂತಿ, ಮಕ್ಕಳಾದ ಚಾಂದಿನಿ, ಸಂಧ್ಯಾ, ಅಳಿಯಂದಿರಾದ ಜಯೇಂದ್ರನ್, ಮಧು, ಸಹೋದರಿಯರು ಹಾಗೂ ಅಪಾರಬಂಧು-ಮಿತ್ರರನ್ನು ಅಗಲಿದ್ದಾರೆ.