ಮೀನುಗಾರಿಕಾ ವಲಯದಲ್ಲಿ ಕೇಂದ್ರಾವಿಷ್ಕೃತ ಯೋಜನೆಗಳನ್ನು ರಾಜ್ಯ ಸರಕಾರ ಬುಡಮೇಲುಗೊಳಿಸುತ್ತಿದೆ- ಪಿ.ಕೆ. ಕೃಷ್ಣದಾಸ್
ಕಾಸರಗೋಡು: ರಾಜ್ಯದ ಪರಂಪರಾಗತ ಮೀನು ವಲಯದಲ್ಲಿ ಕೇಂದ್ರಾವಿಷ್ಕೃತ ಯೋಜನೆಗಳನ್ನು ರಾಜ್ಯ ಸರಕಾರ ಬುಡಮೇಲುಗೊಳಿ ಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಆರೋಪಿಸಿದರು. ತೀರದೇಶ ವಲಯದಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಜ್ಯಾರಿಗೊಳಿಸಬೇಕು, ರಾಜ್ಯ ಸರಕಾರದ ತೀರದೇಶ ಅವಗಣನೆ ಕೊನೆಗೊಳಿಸಬೇಕು, ಎಡಬಲ ಒಕ್ಕೂಟಗಳ ಅವಗಣನೆ ಕೊನೆಗೊಳಿಸ ಬೇಕು ಮೊದಲಾದ ಘೋಷಣೆಗಳನ್ನು ಎತ್ತಿಹಿಡಿದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ನಡೆಸಿದ ತೀರದೇಶ ಯಾತ್ರೆಯ ಸಮಾರೋಪ ಸಮಾರಂಭ ವನ್ನು ಕಾಸರಗೋಡು ಕಸಬಾ ಕಡಪುರದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೀನುಗಾರಿಕಾ ವಲಯದ ಲಾಭ ಹಾಗೂ ಆದಾಯ ಹೆಚ್ಚಿಸಲು ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಮತ್ಸ್ಯ ಸಂಪದ ಯೋಜನೆ ಪ್ರಕಾರ ಪರಂಪರಾಗತ ಮೀನು ಕಾರ್ಮಿಕರಿಗೆ ಅತ್ಯಾಧುನಿಕ ಬೋಟ್ ಖರೀದಿಸಲು ಕೇಂದ್ರ ಸಾಲ ನೀಡಲು ಸಿದ್ಧವಾದಾಗ ರಾಜ್ಯ ಸರಕಾರದ ನಿಷೇಧಾತ್ಮಕ ನಿಲುವಿನಿಂದಾಗಿ ಈ ಯೋಜನೆ ರಾಜ್ಯದಲ್ಲಿ ಜ್ಯಾರಿಯಾ ಗಲಿಲ್ಲ. ಸಾವಿರಾರು ಮೀನು ಕಾರ್ಮಿಕ ಕುಟುಂಬಗಳಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ರೂಪಿಸಿದ ಈ ಯೋಜನೆ ರಾಜ್ಯದ ಮೀನು ಕಾರ್ಮಿಕರಿಗೆ ಲಭಿಸುತ್ತಿಲ್ಲ. ತೀರ ದೇಶ ವಲಯದಲ್ಲಿ ಶುದ್ಧ ಜಲಕ್ಷಾಮ ಪರಿಹರಿಸಲು ಜಲಜೀವನ್ ಮಿಷನ್ ಯೋಜನೆ ಪ್ರಕಾರ ರಾಜ್ಯದಲ್ಲಿ ೪೫ ಶೇಕಡಾ ಮಾತ್ರವೇ ಸಂಪರ್ಕ ನೀಡಲಾಗಿರುವುದು. ರಾಜ್ಯ ಸರಕಾರದ ಪುನರ್‌ಗೇಹಂ ಯೋಜನೆ ೫ ವರ್ಷ ವಾಗಿಯೂ ಜ್ಯಾರಿಗೊಂಡಿಲ್ಲ ವೆಂದು ಪಿ.ಕೆ. ಕೃಷ್ಣದಾಸ್ ಆರೋಪಿಸಿದ್ದಾರೆ.
೩೦೦೦ ಕೋಟಿ ರೂಪಾಯಿಗಳ ಯೋಜನೆಯಲ್ಲಿ ೧೮೦೦೦ ಮನೆ ನಿರ್ಮಿಸಬೇಕೆಂದು ಘೋಷಿಸಲಾಗಿತ್ತು. ಆದರೆ ಇದರಲ್ಲಿ ೫೦೦ಕ್ಕೂ ಕಡಿಮೆ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದರು. ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ ಅಧ್ಯಕ್ಷತೆ ವಹಿಸಿದರು. ಎ. ವೇಲಾಯುಧನ್, ಎನ್. ಮಧುಲಾಲ್ ಮೇಲತ್, ಎಂ. ಬಲ್‌ರಾಜ್ ಸಹಿತ ಹಲವರು ಭಾಗವಹಿಸಿದರು.
ಮಂಜೇಶ್ವರ ಕಣ್ವತೀರ್ಥ ಕಡಲ ಕಿನಾರೆಯಲ್ಲಿ ನಡೆದ ಕಾರ್ಯಕ್ರಮ ವನ್ನು ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಹರಿಶ್ಚಂದ್ರ ಎಂ., ಅಶ್ವಿನಿ ಪಜ್ವ, ಎ.ಕೆ. ಕಯ್ಯಾರ್, ಮಣಿಕಂಠ ರೈ, ಲಕ್ಷ್ಮಣ, ಸುಧಾಮ ಗೋಸಾಡ, ರಕ್ಷಣ್ ಅಡೆಕ್ಕಳ, ಭಾಸ್ಕರ ಪೊಯ್ಯೆ, ಧೂಮಪ್ಪ ಶೆಟ್ಟಿ, ರಾಜೇಶ್ ಕಣ್ವತೀರ್ಥ, ಯಾದವ ಬಡಾಜೆ, ಲೋಕೇಶ್ ನೋಂಡಾ ನೇತೃತ್ವ ನೀಡಿದರು. ಗೋಪಾಲ ಶೆಟ್ಟಿ ಅರಿಬೈಲು, ಕೃಷ್ಣ ಶಿವಕೃಪಾ, ವಿನಯ ಭಾಸ್ಕರ, ಅಶೋಕ್ ಕಣ್ವತೀರ್ಥ, ಮನೋಹರ ಕಡಪ್ಪುರ, ರವಿ ತೂಮಿನಾಡು, ಮಾಧವ ಬಲ್ಯಾಯ, ಸುರೇಶ ಮಂಜೇಶ್ವರ, ರಾಜೇಶ್ ಮಜಲು ಉಪಸ್ಥಿತರಿದ್ದರು. ಯತಿರಾಜ ಶೆಟ್ಟಿ ಸ್ವಾಗತಿಸಿ, ತುಳಸಿ ಕುಮಾರ್ ವಂದಿಸಿದರು.