ಮೀಯಪದವುನಲ್ಲಿ ಉದ್ಯೋಗ ಖಾತರಿ ಕಾರ್ಮಿಕರ ಪ್ರತಿಭಟನೆ
ಮಂಜೇಶ್ವರ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿ ಸುವ ಕ್ರಮವನ್ನು ಕೊನೆಗೊಳಿಸಬೇಕು, ಹೆಚ್ಚಿಸಿದ ಮಜೂರಿಯನ್ನು ಕೂಡಲೇ ವಿತರಿಸಬೇಕು, ಕಡಿತಗೊಳಿಸಿದ ಲೇಬರ್ ಬಜೆಟ್ ಪುನರ್ ಸ್ಥಾಪಿಸಬೇಕು, ಕೇಂದ್ರ ಸರಕಾರ ಉದ್ಯೋಗ ಖಾತರಿ ಯೋಜನೆ ಅವಗಣನೆ ಕೊನೆಗೊಳಿಸ ಬೇಕು ಮುಂತಾದ ಬೇಡಿಕೆಯನ್ನು ಮುಂದಿಟ್ಟುಕೊಂಡು ಎನ್ಆರ್ಇಜಿ ಯೂನಿಯನ್ ನೇತೃತ್ವದಲ್ಲಿ ಮೀಯ ಪದವಿನಲ್ಲಿ ಪ್ರತಿಭಟನೆ ನಡೆಸಲಾ ಯಿತು. ಸಂಘಟನೆಯ ಜಿಲ್ಲಾ ಕಾರ್ಯ ದರ್ಶಿ ಟಿ.ಎಂ.ಎ. ಕರೀಂ ಉದ್ಘಾಟಿಸಿ ದರು. ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಏರಿಯಾ ಕಮಿಟಿ ಅಧ್ಯಕ್ಷೆ ಸರಸ್ವತಿ, ರಾಮಚಂದ್ರ ಟಿ, ಹಂಸ ಮಾತನಾಡಿದರು. ಸಂಘಟನಾ ಸದಸ್ಯೆ ಐರಿನ್ ಜೋಸ್ಪಿನ್ ಸ್ವಾಗತಿಸಿ, ಸದಸ್ಯೆ ಚಂದ್ರಾವತಿ ವಂದಿಸಿದರು.