ಮುಂಜಾನೆ ವೇಳೆ ಕುಸಿದ ಮನೆ : ಕುಟುಂಬ ಅಪಾಯದಿಂದ ಪಾರು

ಬದಿಯಡ್ಕ: ಮುಂಜಾನೆ ಹೊತ್ತಿನಲ್ಲಿ ಹೆಂಚಿನ ಮನೆ ಕುಸಿದು ಬಿದ್ದಿದ್ದು, ಕುಟುಂಬ ತಕ್ಷಣ ಹೊರಗೆ ಓಡಿರುವುದರಿಂದ ಅಪಾಯ ತಪ್ಪಿದೆ.

ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ತಲ್ಪನಾಜೆ ಕಾಲನಿಯಲ್ಲಿ ಶಾಂತ ಎಂಬವರ ಮನೆ ಕುಸಿದು ಬಿದ್ದಿದೆ. ಇಂದು ಮುಂಜಾನೆ 2.30ರ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಶಾಂತರ ಪುತ್ರ, ಸೊಸೆ ಹಾಗೂ ಮೊಮ್ಮಗ ಮನೆಯಲ್ಲಿದ್ದರು. ಮನೆ ಮುರಿಯುವ ಸದ್ದು ಕೇಳಿ ಅವರು ಹೊರಗೆ ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಬಡಕುಟುಂಬದ ಶಾಂತರಿಗೆ 2002-03ರಲ್ಲಿ ಪಂಚಾಯತ್ ನಿಂದ ಲಭಿಸಿದ ಧನ ಸಹಾಯದಿಂದ ಈ ಮನೆ ನಿರ್ಮಿಸಲಾಗಿತ್ತು. ಅನಂತರ ಯಾವುದೇ ದುರಸ್ತಿ ನಡೆಸಿಲ್ಲ. ದುರಸ್ತಿಗಾಗಿ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿ ಲ್ಲವೆಂದು ಕುಟುಂಬ ತಿಳಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page