ಮುಂದುವರಿಯುತ್ತಿರುವ ಅಬಕಾರಿ ಕಾರ್ಯಾಚರಣೆ: ಮದ್ಯ, ವಾಶ್, ತಂಬಾಕು ಉತ್ಪನ್ನ ವಶ
ಕಾಸರಗೋಡು: ಕ್ರಿಸ್ಮಸ್-ಹೊಸವರ್ಷ ದಿನಾಚರಣೆ ವೇಳೆ ಜಿಲ್ಲೆಗೆ ಹೊರಗಿನಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಇತ್ಯಾದಿಗಳು ಹರಿದುಬರುವ ಸಾಧ್ಯತೆಯನ್ನು ಪರಿಗಣಿಸಿ ಅದನ ತಡೆಗಟ್ಟಲು ಅಬಕಾರಿ ತಂಡ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.
ಇದರಂತೆ ಕಾಸರಗೋಡು ಅಬ ಕಾರಿ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ.ರ ನೇತೃತ್ವದ ತಂಡ ನಗರದ ಕರಂದಕ್ಕಾಡ್ನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೭.೦೨ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಆದರೆ ಇದನ್ನು ಬಚ್ಚಿಟ್ಟವರ ಬಗ್ಗೆ ಅಬಕಾರಿ ತಂಡಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಈ ದಾಳಿ ನಡೆಸಿದ ತಂಡದಲ್ಲಿ ಸಿಇಒಗಳಾದ ಮುರಳೀಧರನ್, ಶ್ಯಾಮ್ಜಿತ್ ಮತ್ತು ಧನ್ಯ ಎಂಬವರು ಒಳಗೊಂಡಿದ್ದರು.
ಇದೇ ರೀತಿ ಬೇಡಡ್ಕ ಪೂಕುನ್ನಪಾರದ ಪರೆಯಂಪಳ್ಳ ಪುಳಿಕ್ಕಾಡ್ ರಸ್ತೆಯ ವಿದ್ಯುತ್ ಕಂಬ ಬಳಿ ಕಳ್ಳಭಟ್ಟಿ ಸಾರಾಯಿ ತಯಾರಿಗಾಗಿ ಬಚ್ಚಿಡಲಾಗಿದ್ದ ೬೦ ಲೀಟರ್ ವಾಶ್(ಹುಳಿರಸ)ನ್ನು ಬಂದಡ್ಕ ಅಬಕಾರಿ ರೇಂಜ್ನ ಪಿ.ಒ ಜಯರಾಜನ್ ಟಿ ನೇತೃತ್ವದ ತಂಡ ಪತ್ತೆಹಚ್ಚಿ ವಶಪಡಿಸಿದೆ.
ಕಾಸರಗೋಡು ಅಬಕಾರಿ ರೇಂಜ್ನ ಎಇಐ ಜೋಸೆಫ್ ನೇತೃ ತ್ವದ ಅಬಕಾರಿ ತಂಡ ಕಾಸರಗೋಡು ಟ್ರಾಫಿಕ್ ಸಿಗ್ನಲ್ ಬಳಿಯ ಗೂಡಂ ಗಡಿಯಲ್ಲಿ ನಡೆಸಿದ ತಪಾಸಣೆಯಲ್ಲಿ ೨೫೦ ಗ್ರಾಂ ನಿಷೇಧಿತ ತಂಬಾಕು ಉತ್ಪನ್ನ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಇದಕ್ಕೆ ಸಂಬಂಧಿಸಿ ಆ ಗೂಡಂಗಡಿಯ ಅಬ್ದುಲ್ ಹಮೀದ್ ಎಂಬಾತನಿಂದ ೧೦೦೦ ರೂ. ದಂಡ ವಸೂಲಿ ಮಾಡಲಾಗಿದೆ.