ಮುಂಬೈ ಸರಣಿ ಸ್ಫೋಟ ಅಪರಾಧಿ ಮೊಹಮ್ಮದ್ ಅಲಿಖಾನ್ ಜೈಲಿನಲ್ಲೇ ಹತ್ಯೆ

ಕೊಲ್ಹಾಪುರ: 1993ರ ಮುಂಬೈ  ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೊಳಗಾಗಿ ಜೈಲುವಾಸ ಅನುಭವಿಸುತ್ತಿರುವ  ಮೊಹಮ್ಮದ್ ಅಲಿಕಾನ್ ಅಲಿಯಾಸ್ ಮನೋಜ್ ಕುಮಾರ್ ಬನ್ವರ್‌ಲಾಲ್ ಗುಪ್ತ (70) ನನ್ನು ಕಲಂಬಾ ಜೈಲಿನಲ್ಲಿ  ಐವರು ಖೈದಿಗಳು ಸೇರಿ ಹತ್ಯೆಮಾಡಿದ್ದಾರೆ. ಮಹಾರಾಷ್ಟ್ರ ಕೊಲ್ಹಾಪುರದ ಜೈಲಿನಲ್ಲಿ ಈ ಘಟನೆ ನಡೆದಿದೆ.  ಜೈಲಿನೊಳಗೆ ಇತರ ಐದು ಮಂದಿ ಖೈದಿಗಳು  ಚರಂಡಿಯ ಮುಚ್ಚಳವನ್ನು ಒಡೆದು ಮೊಹಮ್ಮದ್ ಅಲಿ ಖಾನ್‌ನನ್ನು ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಈ ಬಗ್ಗೆ ಸೊಲಾಪುರ ಪೊಲೀಸರು  ಪ್ರಕಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page