ಮುಕ್ಕುಂಜ ದೈವಸ್ಥಾನದಲ್ಲಿ ನೇಮೋತ್ಸವ ನಾಳೆಯಿಂದ
ಮುಳ್ಳೇರಿಯ: ಬೆಳ್ಳೂರು ಮುಕ್ಕುಂಜ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ನಾಳೆಯಿಂದ ಫೆಬ್ರವರಿ 2ರ ವರೆಗೆ ಜರಗಲಿದೆ.
ಇದರಂಗವಾಗಿ ಇಂದು ರಾತ್ರಿ 10ಕ್ಕೆ ಆನೆಚಪ್ಪರ ಏರಿಸುವುದು, 11ಕ್ಕೆ ದೈವಗಳ ಭಂಡಾರವನ್ನು ಮೂಲಸ್ಥಾ ನದಿಂದ ತರುವುದು, ಬಳಿಕ ಗಣಪತಿ ಪ್ರತಿಷ್ಠೆ, ಉಗ್ರಾಣ ತುಂಬಿಸುವುದು, ಬೀರ ತಂಬಿಲ ನಡೆಯಲಿದೆ.
ನಾಳೆ ಅಪರಾಹ್ನ 3 ಗಂಟೆಗೆ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ, ರಾತ್ರಿ 9ಕ್ಕೆ ಬೀರತಂಬಿಲ, ಫೆ. 1ರಂದು ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, 2 ಗಂಟೆಗೆ ಶ್ರೀ ಪೂಮಾಣಿ ದೈವದ ನೇಮೋತ್ಸವ, ರಾತ್ರಿ 7ಕ್ಕೆ ನೃತ್ಯ ವೈಭವ, 9ಕ್ಕೆ ಬೀರ ತಂಬಿಲ, 2ರಂದು ಬೆಳಿಗ್ಗೆ 10ಕ್ಕೆ ಬೀರ್ಣಾಳ್ವ ದೈವದ ನೇಮೋತ್ಸವ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, 1 ಗಂಟೆಗೆ ಶ್ರೀ ಧೂಮಾವತಿ ದೈವದ ನೇಮೋತ್ಸವ, ಸಂಜೆ 6ಕ್ಕೆ ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವ, ರಾತ್ರಿ 9ಕ್ಕೆ ಶ್ರೀ ಮಹಾವಿಷ್ಣು ಯಕ್ಷಗಾನ ಕಲಾ ಸಂಘ ಬೆಳ್ಳೂರು ಅವರಿಂದ ಯಕ್ಷಗಾನ ಬಯಲಾಟ, 10ಕ್ಕೆ ಬೀರ ತಂಬಿಲ, ನವಕ ಕಲಶಾಭಿಷೇಕ, 3ರಂದು ಬೆಳಿಗ್ಗೆ 9ಕ್ಕೆ ಗ್ರಾಮ ದೈವಕ್ಕೆ ಬಯಲುಕೋಲ ನಡೆಯಲಿದೆ.