ಮುಳಿಂಜ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ ಆರಂಭ

ಉಪ್ಪಳ: ಮುಳಿಂಜ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಿನ್ನೆಯಿಂದ ಆರಂಭಗೊAಡಿದ್ದು, ಈ ತಿಂಗಳ 18ರ ತನಕ ನಡೆಯಲಿದೆ. ನಿನ್ನೆ ಬಲಿ ಉತ್ಸವ, ಧ್ವಜಾರೋಹಣ ಸಹಿತ ವಿವಿಧ ವೈಧಿಕ ಕಾರ್ಯಕ್ರಮ ಗಳೊಂದಿಗೆ ಉತ್ಸವ ಆರಂಭಗೊA ಡಿದೆ. ಇಂದು ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ನವಕ ಕಲಶಾಭಿಷೇಕ, ಭಜನೆ ನಡೆಯಿತು. ಸಂಜೆ 6.30ರಿಂದ ಭಜನೆ, ರಾತ್ರಿ 7ಕ್ಕೆ ಮಹಾಪೂಜೆ, 8ರಿಂದ ದರ್ಶನ ಬಲಿ ಉತ್ಸವ, 8.30ರಿಂದ ಶ್ರೀ ಅಯ್ಯಪ್ಪ ಕೃಪಾ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು ಇದರ ಸ್ಥಳೀಯ ಪ್ರತಿಭೆಗಳಿಂದ ಸುದರ್ಶನ ವಿಜಯ, ನರಕಾಸುರ ವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

You cannot copy contents of this page