ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ 14ರಿಂದ

ಉಪ್ಪಳ: ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ಮಾ. 14ರಿಂದ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 14ರಂದು ಪೂರ್ವಾಹ್ನ 8.30ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, 11ಕ್ಕೆ ಬಲಿ ಉತ್ಸವ, ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ 6.30ರಿಂದ ಭಜನೆ, 7.30ರಿಂದ ಮಹಾಪೂಜೆ, ಬಲಿ ಉತ್ಸವ, ರಾತ್ರಿ ಅನ್ನಸಂತರ್ಪಣೆ, 8.30ರಿಂದ ‘ಒರಿಯಾಂಡಲ ಸರಿಬೋಡು’ ನಾಟಕ ಪ್ರದರ್ಶನ, 15ರಂದು ಪೂರ್ವಾಹ್ನ ಬಲಿ ಉತ್ಸವ, 8ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, 10.30ರಿಂದ ಭಜನೆ, 12.30ಕ್ಕೆ ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ 6.30ರಿಂದ ಭಜನೆ, ರಾತ್ರಿ 7.30ಕ್ಕೆ ಮಹಾಪೂಜೆ, 8ರಿಂದ ದರ್ಶನ ಬಲಿ ಉತ್ಸವ, ಅನ್ನಸಂತರ್ಪಣೆ, 9ರಿಂದ ‘ತನಿಯಜ್ಜೆ’ ತುಳು ನಾಟಕ, 16ರಂದು ಪೂರ್ವಾಹ್ನ 8ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, 10.30ರಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ದರ್ಶನ ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ 6ರಿಂದ ಭಜನೆ, ರಾತ್ರಿ 7.30ಕ್ಕೆ ಮಹಾಪೂಜೆ, 8.30ರಿಂದ ನಡುದೀಪೋತ್ಸವ, ದರ್ಶನ ಬಲಿ, ಧೂಮಾವತೀ ದೈವದ ಭೇಟಿ, ರಾಜಾಂಗಣ ಪ್ರಸಾದ, ಅನ್ನಸಂತರ್ಪಣೆ, 17ರಂದು ಬೆಳಿಗ್ಗೆ ದರ್ಶನ ಬಲಿ, 8ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, 10.30ರಿಂದ ಭಜನೆ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, ರಾತ್ರಿ 7ರಿಂದ ಭಜನೆ, 7.30ಕ್ಕೆ ಮಹಾಪೂಜೆ, 8ರಿಂದ ಶ್ರೀ ಭೂತ ಬಲಿ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ, 18ರಂದು ಪೂರ್ವಾಹ್ನ 6.38ಕ್ಕೆ ಕವಾಟೋದ್ಘಾಟನೆ, ಅಭಿಷೇಕ, ಮಹಾಪೂಜೆ, 8ಕ್ಕೆ ಗಣಪತಿ ಹವನ, 10.30ರಿಂದ ಭಜನೆ, 11ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ಮಹಾಪೂಜೆ, 8.15ರಿಂದ ದರ್ಶನಬಲಿ, ರಾಜಾಂಗಣ ಪ್ರಸಾದ, ಆರಾಟ ಉತ್ಸವ, ಅನ್ನಸಂತರ್ಪಣೆ, 8.45ರಿಂದ ಭಜನೆ, 9.30ರಿಂದ ದ್ವಜಾವರೋಹಣ, ಮಹಾ ಮಂತ್ರಾಕ್ಷತೆ, 19ರಂದು ಸಂಜೆ 3ರಿಂದ ಮುಳಿಂಜಗುತ್ತು ಮನೆಯಿಂದ ಕ್ಷೇತ್ರಕ್ಕೆ ಭಂಡಾರ ಆಗಮನ, ಬಳಿಕ ಗುಳಿಗ ದೈವದ ಕೋಲ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page