ಮುಳಿಯಾರು ಪಾಂಡಿಕಂಡದಲ್ಲಿ ಚಿರತೆ ದೃಶ್ಯ ಪತ್ತೆ
ಬೋವಿಕ್ಕಾನ: ಮುಳಿಯಾರು ಪಂಚಾಯತ್‌ನ ಪಾಂಡಿಕಂಡದ ಹೊಳೆ ಬದಿಯಲ್ಲಿ ಮುಂಜಾನೆ ಚಿರತೆ ದೃಶ್ಯ ಅರಣ್ಯ ಇಲಾಖೆ ಸ್ಥಾಪಿಸಿದ ಸಿಸಿ ಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.
ಚಿರತೆ ದೃಶ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖ ಹೊಸ ಬೋನು ಸ್ಥಾಪಿಸಲು ಮುಂದಾಗಿದೆ. ಪಾಂಡಿ ಕಂಡದಲ್ಲಿ ವಿಶೇಷ ರೀತಿಯ ಆಮೆಗಳ ದೃಶ್ಯ ಚಿತ್ರೀಕರಿಸಲು ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ಆ ಕ್ಯಾಮರಾದಲ್ಲಿ ಚಿರತೆ ದೃಶ್ಯ ಪತ್ತೆಯಾಗಿದೆ. ಚಿರತೆ ಹೊಳೆ ಬದಿ ನಡೆದುಕೊಂಡು ಹೋಗಿ ಅಲ್ಲಿ ಅಲ್ಪ ವಿಶ್ರಾಂತಿ ಪಡೆದ ಬಳಿಕ ಅಲ್ಲಿಂದ ಮುಂದಕ್ಕೆ ಸಾಗುವ ದೃಶ್ಯಗಳು ಕ್ಯಾಮರಾದಲ್ಲಿ ಪತ್ತೆಯಾಗಿದೆ. ಇದು ದೊಡ್ಡ ಗಾತ್ರದ ಚಿರತೆಯಾಗಿದೆ ಎಂದು ಅರಣ್ಯ ಪಾಲಕರು ಹೇಳುತ್ತಿ ದ್ದಾರೆ. ಪರಿಸರದ ಹಲವು ಸಾಕು ನಾಯಿಗಳು, ಬೆಕ್ಕು ಇತ್ಯಾದಿಗಳು ಇತ್ತೀಚೆಗಿನಿಂದ ಅಪ್ರತ್ಯಕ್ಷವಾಗುತ್ತಿತ್ತು. ಚಿರತೆ ದೃಶ್ಯ ಪತ್ತೆಯಾರುವುದರಿಂದಾಗಿ ಅದು ಈ ಪ್ರದೇಶದ ಜನರಲ್ಲಿ ಭೀತಿ ಆವರಿಸುವಂತೆ ಮಾಡಿದೆ. ಆದ್ದರಿಂದ ಈ ಪ್ರದೇಶದ ಜನತೆಗೆ ಅರಣ್ಯ ಇಲಾಖೆ ಜಾಗ್ರತಾ ನಿರ್ದೇಶ ನೀಡಿದೆ.