ಮುಳ್ಳೇರಿಯ-ಎಡಪರಂಬ ಮಲೆನಾಡು ಹೆದ್ದಾರಿ ನಿರ್ಮಾಣ ಆರಂಭ: ಲೋಪದೋಷ ನಿವಾರಿಸಬೇಕೆಂದು ಸಚಿವರಿಗೆ ಮನವಿ

ಮುಳ್ಳೇರಿಯ: ಮಲೆನಾಡು ಹೆದ್ದಾರಿಯನ್ನು ದೂರದೃಷ್ಟಿಯೊಂ ದಿಗೂ, ಲೋಪವಿಲ್ಲದ ರೀತಿಯಲ್ಲಿ ನಿರ್ಮಿಸಬೇಕೆಂದು ಸಮಾಜ ಸೇವಕ ಮುಳ್ಳೇರಿಯ ನಿವಾಸಿ ಬಾಲಕೃಷ್ಣ ರೈ ಸಚಿವ ಮುಹಮ್ಮದ್ ರಿಯಾಸ್‌ಗೆ ಕಳುಹಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮಲೆನಾಡು ಹೆದ್ದಾರಿಯ ಕಾಮಗಾರಿ ಈಗ ಮುಳ್ಳೇರಿಯದಿಂದ ಎಡಪರಂಬವರೆಗಿನ ರಸ್ತೆ ಕಾಮಗಾರಿ ಈಗ ಆರಂಭಿಸಲಾಗಿದೆ. ಕಿಫ್‌ಬಿಯ ೮೩.೮೫ ಕೋಟಿ ರೂ. ವೆಚ್ಚದಲ್ಲಿ ೧೦ ಕಿಲೋ ಮೀಟರ್ ದೂರದ ಈ ರಸ್ತೆಯನ್ನು ೯ ಮೀಟರ್ ಅಗಲದಲ್ಲಿ ನಿರ್ಮಿಸುತ್ತಿರುವುದು  ಈಗ ಇರುವ ತಿರುವು, ಏರಿಳಿತಗಳನ್ನು ಅದೇ ರೀತಿ ಉಳಿಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆಯೆಂದು ಮನವಿಯಲ್ಲಿ ಸೂಚಿಸಲಾಗಿದೆ. ಇದರಿಂದ ಸಂಚಾರಕ್ಕೆ ಉಪಕಾರವಾಗದೆಂದೂ, ನಿರಂತರ ಅಪಘಾತಗಳಿಗೂ ಕಾರಣ ವಾಗಲಿದೆಯೆಂದೂ  ಬಾಲ ಕೃಷ್ಣ ರೈ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರೀ ಮೊತ್ತ ವೆಚ್ಚಮಾಡಿ ನಿರ್ಮಿಸುವ ರಸ್ತೆ ಅರಣ್ಯದ ಮೂಲಕ ಸಾಗುತ್ತಿರುವುದರಿಂದಾಗಿ ತಿರುವು, ಇಳಿಜಾರು ಮೊದಲಾದ ವುಗಳನ್ನು ಈಗಲೇ ಬದಲಿಸದಿದ್ದರೆ ಮುಂದೆ ಇದನ್ನು ಬದಲಿಸಲು ಕೂಡಾ ಸಾಧ್ಯವಿಲ್ಲ.

ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿಯಲ್ಲಿ ಉಪಯೋಗಿಸಬೇಕೆಂಬ ಬಗ್ಗೆ ಸಂಬಂಧಪಟ್ಟವರು ಪುನರ್ ಚಿಂತನೆ ನಡೆಸಬೇಕೆಂದು ಸಚಿವರಿಗೆ ನೀಡಿದ ಮನವಿಯಲ್ಲಿ ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page