ಮುಳ್ಳೇರಿಯ: ತಲೆಹೊರೆ ಕಾರ್ಮಿಕನಿಗೆ ಬಿಎಂಎಸ್ನಿಂದ ಸನ್ಮಾನ, ಬೀಳ್ಕೊಡುಗೆ
ಮುಳ್ಳೇರಿಯ: ಸುದೀರ್ಘ ೨೫ ವರ್ಷಗಳ ಕಾಲ ತಲೆಹೊರೆ ಕಾರ್ಮಿಕ ನಾಗಿ ಕೆಲಸ ನಿರ್ವಹಿಸಿದ ಬಳಿಕ ವೃತ್ತಿಯಿಂದ ನಿವೃತ್ತರಾದ ಮಿಂಚಿಪದವಿನ ರವಿ ಅವರನ್ನು ಬಿಎಂಎಸ್ ಮುಳ್ಳೇರಿಯ ಘಟಕ ತಲೆಹೊರೆ ಕಾರ್ಮಿಕರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾ ಯಿತು. ಕಾರ್ಯಕ್ರಮವನ್ನು ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಉದ್ಘಾಟಿಸಿದರು. ಪುರುಷೋತ್ತಮ ಕುಂಟಾರು ಅಧ್ಯಕ್ಷತೆ ವಹಿಸಿದರು. ಕಾರಡ್ಕ ಗ್ರಾಮ ಪಂ. ಅಧ್ಯಕ್ಷ ಗೋಪಾಲಕೃಷ್ಣ ಭಟ್, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅಧ್ಯಕ್ಷ ಗಣೇಶ್ ವತ್ಸ, ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯ ಶಿವಕೃಷ್ಣ ಭಟ್, ಬಿಜೆಪಿ ಪಂಚಾಯತ್ ಅಧ್ಯಕ್ಷ ವಸಂತ, ಎಬಿವಿಪಿ ಜಿಲ್ಲಾ ಸಮಿತಿ ಸದಸ್ಯ ಶಬರೀಶ್, ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳಾದ ಎಂ.ಕೆ. ರಾಘವನ್, ಕೆ.ಎ. ಶ್ರೀನಿವಾ ಸನ್, ಪಿ. ದಿನೇಶ್, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್, ವಲಯ ಅಧ್ಯಕ್ಷ ಆನಂದ ಸಿ.ಎಚ್, ಸೆಕ್ರೆಟರಿ ಭಾಸ್ಕರನ್, ತಲೆಹೊರೆ ಕಾರ್ಮಿಕರ ವಲಯ ಪ್ರಭಾರಿ ರವಿ ಏತಡ್ಕ ಮೊದಲಾದವರು ಮಾತನಾಡಿ ದರು. ದುರ್ಗಾಪ್ರಸಾದ್ ಸ್ವಾಗತಿಸಿ, ಸದಾಶಿವ ವಂದಿಸಿದರು.