ಮುಸ್ಲಿಂಲೀಗ್ ಜಿಲ್ಲಾ ಸಮಿತಿ ಹಜ್ಜ್ ತರಗತಿ 14ರಂದು

ಕಾಸರಗೋಡು: ಜಿಲ್ಲೆಯಿಂದ ಹಜ್ಜ್‌ಗೆ ತೆರಳುವವರಿಗಾಗಿ ಮುಸ್ಲಿಂಲೀಗ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮೇ 14ರಂದು ಬೆಳಿಗ್ಗೆ 10 ಗಂಟೆಗೆ ಚೆರ್ಕಳದ ಐಮ್ಯಾಕ್ಸ್ ಸಭಾಂಗಣದಲ್ಲಿ ಹಜ್ಜ್ ಅಧ್ಯಯನ ತರಗತಿ, ಬೀಳ್ಕೊಡುಗೆ ನೀಡಲು ಮುಸ್ಲಿಂಲೀಗ್ ಜಿಲ್ಲಾ ನಾಯಕತ್ವ ಸಭೆ ತೀರ್ಮಾನಿಸಿದೆ. ವಾರ್ಡ್, ಪಂಚಾಯತ್, ನಗರಸಭೆ, ವಿಧಾನಸಭಾ ಮಂಡಲ ಮಟ್ಟದಲ್ಲಿ ಸಂಘಟನೆಯನ್ನು ಇನ್ನಷ್ಟು ದಕ್ಷಗೊಳಿಸಲು ಅಗತ್ಯದ ಚಟುವಟಿಕೆ ಕ್ರಮಗಳನ್ನು ಆವಿಷ್ಕರಿಸಲು ವಿಧಾನಸಭಾ ಮಂಡಲ ಪದಾಧಿಕಾರಿಗಳ, ಪಂಚಾಯತ್, ನಗರಸಭೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಂಗಮವನ್ನು ಎರಡು ವಲಯಗಳಲ್ಲಾಗಿ ನಡೆಸಲು ತೀರ್ಮಾನಿಸಲಾಯಿತು.

ಮಂಜೇಶ್ವರ, ಕಾಸರಗೋಡು, ಉದುಮ ವಿಧಾನಸಭಾ ಮಂಡಲಗಳ ಸಂಗಮ ಮೇ 28ರಂದು ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲೂ, ಕಾಞಂಗಾಡ್ ತೃಕರಿಪುರ ವಿಧಾನಸಭಾ ಮಂಡಲಗಳ ಸಂಗಮ ಮೇ 30ರಂದು ಬೆಳಿಗ್ಗೆ 11 ಗಂಟೆಗೆ ಮುಸ್ಲಿಂಲೀಗ್ ಕಾಞಂಗಾಡ್ ವಿಧಾನಸಭಾ ಮಂಡಲ ಕಚೇರಿಯಲ್ಲಿ ನಡೆಸಲಾಗುವುದು. ಹಜ್ಜ್‌ಗೆ ತೆರಳುವ ಮುಸ್ಲಿಂಲೀಗ್ ರಾಜ್ಯ ಕೋಶಾಧಿಕಾರಿ ಸಿ.ಟಿ. ಅಹಮ್ಮದಾಲಿ ಯವರಿಗೆ ಸಭೆ ಬೀಳ್ಕೊಡುಗೆ ನೀಡಿತು. ಕಾಞಂಗಾಡ್ ಸಿ.ಎಚ್. ಅಸ್ಲಾಂರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಚುನಾವಣೆಯಲ್ಲಿ ಐಕ್ಯರಂಗಕ್ಕೆ ಮತದಾನ ಮಾಡಿದ ಮತದಾರರಿಗೂ, ಹಗಲು ರಾತ್ರಿ ದುಡಿದ ಕಾರ್ಯಕರ್ತ ರಿಗೂ, ಮುಖಂಡರಿಗೂ, ಪದಾಧಿಕಾರಿ ಗಳಿಗೂ ಸಭೆ ಕೃತಜ್ಞತೆ ಸಲ್ಲಿಸಿತು. ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್‌ಮಾನ್ ಸ್ವಾಗತಿಸಿದರು. ಶಾಸಕರು, ಮುಖಂಡರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page