ಮುಸ್ಲಿಂಲೀಗ್ ವಲಯ ನಾಯಕತ್ವ ಸಭೆ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆ ಹಾಗೂ ಅದಕ್ಕೆ ಸಂಬಂಧಿಸಿ ಮತದಾರರ ಸೇರಿಸುವಿಕೆ, ವಾರ್ಡ್ ವಿಭಜನೆ ಚಟುವಟಿಕೆಗಳು ನಿಷ್ಪಕ್ಷ ಹಾಗೂ ನೀತಿಪೂರ್ವಕವಾಗಿ ನಡೆಸಬೇಕೆಂದು ಮುಸ್ಲಿಂಲೀಗ್ ವಲಯ ನಾಯಕತ್ವ ಸಭೆ ಆಗ್ರಹಿಸಿದೆ. ಮುಸ್ಲಿಂಲೀಗ್ ಜಿಲ್ಲಾ ಪದಾಧಿಕಾರಿಗಳು, ಮಂಜೇಶ್ವರ, ಕಾಸರಗೋಡು, ಉದುಮ ವಿಧಾನಸಭಾ ಮಂಡಲ ಪದಾಧಿಕಾರಿಗಳು ಸಹಿತ ಹಲವರು ಭಾಗವಹಿಸಿದರು. ಸಭೆಯನ್ನು ರಾಜ್ಯ ಸೆಕ್ರಟರಿಯೇಟ್ ಸದಸ್ಯ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಮುಸ್ಲಿಂಲೀಗ್ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಅಧ್ಯಕ್ಷತೆ ವಹಿಸಿ ದರು. ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಪ್ಲಸ್ ವನ್‌ಗೆ ಹೆಚ್ಚು ಬ್ಯಾಚ್‌ಗಳನ್ನು ಮಂಜೂರುಗೊಳಿಸಿ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಮುಸ್ಲಿಂಲೀಗ್ ನಡೆಸುವ ಆಂದೋಲನಗಳ ಅಂಗವಾಗಿ ಕಲೆಕ್ಟ್ರೇಟ್ ಮುಂಭಾಗದಲ್ಲಿ ನಡೆಯುವ ಧರಣಿಯನ್ನು ಯಶಸ್ವಿಗೊಳಿಸಲು ಸಭೆ ತೀರ್ಮಾನಿಸಿದೆ. ಹಲವು ಮುಖಂಡರು ಭಾಗವಹಿಸಿದರು.