ಮೂವರು ಯುವಕರಿಗೆ ಹಲ್ಲೆ: ನ್ಯಾಯಾಲಯ ನಿರ್ದೇಶದಂತೆ ೧೨ ಮಂದಿ ವಿರುದ್ಧ ಕೇಸು ದಾಖಲು
ಕುಂಬಳೆ: ಮೂವರು ಯುವಕರಿಗೆ ಹಲ್ಲೆಗೈದ ಪ್ರಕರಣದಲ್ಲಿ ನ್ಯಾಯಾಲಯದ ನಿರ್ದೇಶ ಮೇರೆಗೆ ಹನ್ನೆರಡು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.
ಶಿರಿಯಾದ ಶಿರಿಯ ಕ್ವಾರ್ಟರ್ಸ್ ನಲ್ಲಿ ವಾಸಿಸುವ ಆಯಿಶಾ ಎಂಬವರು ನೀಡಿದ ದೂರನ್ನು ಪರಿಗಣಿಸಿದ ನ್ಯಾಯಾಲಯ ಹಲ್ಲೆ ಆರೋಪಿಗಳ ವಿರುದ್ಧ ಕೇಸು ದಾಖಲಿಸುವಂತೆ ನಿರ್ದೇಶ ನೀಡಿದೆ. ಆಯಿಶಾರ ಪುತ್ರ ಇಬ್ರಾಹಿಂ ಅಸ್ಲಾಂ, ಆತನ ಸ್ನೇಹಿತನಾದ ಮೊಹಮ್ಮದ್ ಬಿಲಾಲ್, ಮುಸ್ತಾಕ್ ಎಂಬಿವರನ್ನು ೨೦೨೩ ಡಿಸೆಂಬರ್ ೫ರಂದು ಶಿರಿಯ ಬಸ್ ಸ್ಟಾಪ್ ಬಳಿ ತಂಡವೊಂದು ತಡೆದು ನಿಲ್ಲಿಸಿ ಹಲ್ಲೆಗೈದಿತ್ತೆಂದು ದೂರಲಾಗಿದೆ. ಈ ಬಗ್ಗೆ ಆಯಿಶಾ ಕಾಸರಗೋಡು ಜೆಎಫ್ಸಿಎಂ (ದ್ವಿತೀಯ) ನ್ಯಾಯಾಲಯಕ್ಕೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಕೇಸು ದಾಖಲಿಸುವಂತೆ ನಿರ್ದೇಶ ನೀಡಿದೆ. ಇದರಂತೆ ಮೊಹಮ್ಮದ್ ಆಶಿಕ್ ಹಾಗೂ ಕಂಡರೆ ಪತ್ತೆ ಹಚ್ಚಬಹುದಾದ ಇತರ ೧೧ ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.