ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯ: ವಧು ಕುಸಿದು ಬಿದ್ದು ಮೃತ್ಯು
ಲಕ್ನೋ: ವಿವಾಹದ ಹಿಂದಿನ ದಿನ ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯಗೈಯ್ಯುತ್ತಿದ್ದ ಮಧ್ಯೆ ವಧು ಕುಸಿದು ಬಿದ್ದು ಮೃತಪಟ್ಟಳು. ದೀಕ್ಷಾ (22) ಮೃತಪಟ್ಟ ಯುವತಿ. ಹೃದಯಾಘಾತವೇ ಮರಣಕ್ಕೆ ಕಾರಣವೆನ್ನಲಾಗಿದೆ. ಉತ್ತರ ಪ್ರದೇಶದ ಇಸ್ಲಾಂ ನಗರ್ನಲ್ಲಿ ಘಟನೆ ನಡೆದಿದೆ. ದೀಕ್ಷಾ ಹಾಗೂ ಸೌರವ್ರೊಂದಿಗಿನ ವಿವಾಹ ನಿನ್ನೆ ನಡೆಯಬೇಕಾಗಿತ್ತು. ಇದರ ಹಿಂದಿನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮ ದಲ್ಲಿ ದುರ್ಘಟನೆ ಸಂಭವಿಸಿದೆ.