‘ಮೇರಾ ಮಿಟ್ಟಿ ಮೇರಾ ದೇಶ್’ ಮಂಜೇಶ್ವರ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮ

ಮಂಜೇಶ್ವರ: ಆಜಾದಿಕಾ ಅಮೃತ್ ಮಹೋತ್ಸವ್‌ನ ಸಮಾರೋಪದಂಗ ವಾಗಿ ನನ್ನ ಮಣ್ಣು, ನನ್ನ ದೇಶ (ಮೇರಾ ಮಿಟ್ಟಿ ಮೇರಾ ದೇಶ್) ಕಾರ್ಯಕ್ರಮ  ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ನಡೆಯಿತು.ಮಂಜೇಶ್ವರ ಬ್ಲೋಕ್‌ನ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಕಲಶದಲ್ಲಿರಿಸಿದ್ದು, ಅದನ್ನು ಈ ತಿಂಗಳ ೩೦, ೩೧ರಂದು ದೆಹಲಿಯಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮಕ್ಕೆ ತಲುಪಿಸಲಾಗುವುದು. ದೇಶದ ವಿವಿಧ ಭಾಗಗಳಿದ ಸಂಗ್ರಹಿಸಲಾದ ಮಣ್ಣನ್ನು ಬಳಸಿ ದೆಹಲಿಯಲ್ಲಿ ಉದ್ಯಾನ ನಿರ್ಮಿಸಲಾಗುವುದು. ಮಂಜೇಶ್ವರ ಕಾಲೇಜಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶೋಭಾಯಾತ್ರೆ, ಪ್ರತಿಜ್ಞಾ ಸ್ವೀಕಾರ ನಡೆಸಿದರು. ಡೆಪ್ಯುಟಿ ಕಲೆಕ್ಟರ್ ದಿನೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲ ಮೊಹಮ್ಮದಲಿ ಅಧ್ಯಕ್ಷತೆ ವಹಿಸಿದರು. ಯೋಧರಾದ ಕ್ಯಾಪ್ಟನ್ ಅರವಿಂದಾಕ್ಷನ್ ಪಿಳ್ಳೆ, ಚೇತನರಾಮ, ಕರುಣಾಕರನ್ ಎಂಬಿವರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page