ಮೇಸ್ತ್ರಿಕುಸಿದು ಬಿದ್ದು ನಿಧನ

ಮಂಜೇಶ್ವರ: ಸಾರಣೆ ಮೇಸ್ತ್ರಿ ಕುಸಿದುಬಿದ್ದು ನಿಧನಹೊಂದಿದರು. ಕಡಂಬಾರುಕಟ್ಟೆ ದಿ| ಶಂಕರ  ಅವರ ಪುತ್ರ ಅಶೋಕ ಎಂ (೩೮) ನಿಧನಹೊಂದಿದವರು. ಮಂಗಳವಾರ ಸಂಜೆ ಮನೆ ಅಂಗಳದಲ್ಲಿ ಕುಸಿದುಬಿದ್ದ ಇವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ರಾತ್ರಿ ನಿಧನಹೊಂದಿದರು.

ಮೃತರು ಪತ್ನಿ ವೇದಾವತಿ, ಪುತ್ರ ಜಿಶಾನ್, ಸಹೋದರಿಯರಾದ ಸವಿತಾ, ಶಾರದಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಾಯಿ ಕಮಲ, ಸಹೋದರ ರವಿ, ಸಹೋದರಿ ಶಾಂತಿ ಈ ಹಿಂದೆ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page